Tuesday, June 15, 2021
Homeಜಿಲ್ಲೆದೇಶದಲ್ಲೇ ಮೊದಲ 'ಚರ್ಮದ ಬ್ಲ್ಯಾಕ್ ಫಂಗಸ್' ಕೇಸ್ ಪತ್ತೆ : ಏಲ್ಲಿ ಗೊತ್ತಾ.?

ಇದೀಗ ಬಂದ ಸುದ್ದಿ

ದೇಶದಲ್ಲೇ ಮೊದಲ ‘ಚರ್ಮದ ಬ್ಲ್ಯಾಕ್ ಫಂಗಸ್’ ಕೇಸ್ ಪತ್ತೆ : ಏಲ್ಲಿ ಗೊತ್ತಾ.?

ಚಿತ್ರದುರ್ಗ : ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕಿನ ಜೊತೆಗೆ, ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ಇದುವರೆಗೆ ರಾಜ್ಯಾಧ್ಯಂತ 1,370 ಜನರಿಗೆ ಬ್ಲ್ಯಾಕ್ ಫಂಗಸ್ ರೋಗ ಪತ್ತೆಯಾಗಿದೆ. ಇದರ ಮಧ್ಯೆ ದೇಶದಲ್ಲೇ ಮೊದಲ ಚರ್ಮ ಬ್ಲ್ಯಾಕ್ ಫಂಗಸ್ ಪ್ರಕರಣ ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಈ ಕುರಿತಂತೆ ಮಾಹಿತಿಯನ್ನ ಚಿತ್ರದುರ್ಗದ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ತಜ್ಞ ಇಎನ್.ಟಿ ವೈದ್ಯ ಡಾ.ಎನ್.ಬಿ.ಪ್ರಹ್ಲಾದ್ ಮಾಹಿತಿ ನೀಡಿದ್ದು, ನಗರದಲ್ಲಿನ ಕೊರೋನಾ ಸೋಂಕಿನಿಂದ ಗುಣಮುಖವಾಗುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ದೇಶದಲ್ಲೇ ಮೊದಲು ಎನ್ನುವಂತೆ ಚರ್ಮದ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿರೋದಾಗಿ ತಿಳಿಸಿದ್ದಾರೆ.

ಇನ್ನೂ ದೇಶದಲ್ಲೇ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಪತ್ತೆಯಾದಂತ ವ್ಯಕ್ತಿಗೆ ಕರ್ನಾಟಕ ಇಎನ್ ಟಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಕರ್ನಾಟಕ ಇ ಎನ್ ಟಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಗೂ ಚಿಕಿತ್ಸೆ ನೀಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img