Monday, June 14, 2021
Homeಸುದ್ದಿ ಜಾಲಐಎಎಸ್ ಅಧಿಕಾರಿ ದೀಪಾ ಚೋಳನ್ ತಂದೆ, ತಾಯಿ ಕೊರೊನಾಗೆ ಬಲಿ

ಇದೀಗ ಬಂದ ಸುದ್ದಿ

ಐಎಎಸ್ ಅಧಿಕಾರಿ ದೀಪಾ ಚೋಳನ್ ತಂದೆ, ತಾಯಿ ಕೊರೊನಾಗೆ ಬಲಿ

ಬೆಂಗಳೂರು: ಐಎಎಸ್ ಅಧಿಕಾರಿಯಾದ ದೀಪಾ ಚೋಳನ್ರವರ ತಂದೆ ಮತ್ತು ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ದೀಪಾ ಚೋಳನ್ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್ ಪತ್ನಿ. ಸದ್ಯ ಚೋಳನ್ ದಂಪತಿ ಕೊವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದಾರೆ. 10 ದಿನದ ಅಂತರದಲ್ಲಿ ದೀಪಾ ಚೋಳನ್ ತಂದೆ ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕೊವಿಡ್ ನಿರ್ವಹಣೆ ಹೊಣೆ ಹೊತ್ತಿದ್ದ ರಾಜೇಂದ್ರ ಚೋಳನ್ ಅತ್ತೆ, ಮಾವನ ಅಂತ್ಯಸಂಸ್ಕಾರಕ್ಕೂ ಹೋಗಲು ಸಾಧ್ಯವಾಗಲಿಲ್ಲ.

ದೀಪಾ ಚೋಳನ್ ಮತ್ತು ರಾಜೇಂದ್ರ ಚೋಳನ್ ಕೊರೊನಾ ವಿರುದ್ಧ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಮಹಾಮಾರಿ ಕೊರೊನಾದಿಂದ ದೀಪಾ ಚೋಳನ್ ತನ್ನ ತಂದೆ, ತಾಯಿಯನ್ನು ಕಳೆದುಕೊಂಡಿದ್ದಾರೆ. ದೀಪಾ ಮೇ 26 ರಂದು ತಂದೆಯನ್ನು ಕಳೆದುಕೊಂಡಿದ್ದರೆ, ಎರಡು ವಾರದ ಮುಂಚೆ ತಾಯಿ ನಿಧನರಾಗಿದ್ದರು. ರಾಜೇಂದ್ರ ಚೋಳನ್ ತಂದೆ ತಾಯಿಗೂ ಇದೀಗ ಕೊವಿಡ್ ಧೃಡಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ತವ್ಯದಲ್ಲಿರುವ ಕಾರಣ ರಾಜೇಂದ್ರ ಚೋಳನ್​ಗೆ ಊರಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img