Thursday, July 29, 2021
Homeಸುದ್ದಿ ಜಾಲರಾಜ್ಯದಲ್ಲಿ 1370 ಮಂದಿಗೆ ಬ್ಲಾಕ್ ಫಂಗಸ್, 51 ಜನ ಬಲಿ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ 1370 ಮಂದಿಗೆ ಬ್ಲಾಕ್ ಫಂಗಸ್, 51 ಜನ ಬಲಿ

ಬೆಂಗಳೂರು, ಜೂ.1- ರಾಜ್ಯದಲ್ಲಿ ಬ್ಲಾಕ್ ಫಂಗಸ್ ನಿಂದ 51 ಮಂದಿ ಮೃತಪಟ್ಟಿದ್ದು, 1370 ಜನ ರೋಗಕ್ಕೆ ಸಿಲುಕಿದ್ದಾರೆ, 27 ಮಂದಿ ಗುಣಮುಖರಾಗಿ 1292 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸೋಂಕಿತರ ಚಿಕಿತ್ಸೆಗೆ ಕೇಂದ್ರ ಸರ್ಕಾರ ಈವರೆಗೂ ರಾಜ್ಯಕ್ಕೆ 12,71 ವೈಯಲ್ಸ್ ಅಂಪೋಟೆರಿಸಿನ್ ಬಿ ಔಷಧಿಯನ್ನು ಪೂರೈಸಿದ್ದು, ಇನ್ನೂ ಒಂಬತ್ತು ಪಟ್ಟು ಔಷಧಿಯ ಕೊರತೆ ಕಾಡುತ್ತಿದೆ.

ರಾಜ್ಯದಲ್ಲಿ ಬೆಂಗಳೂರು, ಕಲ್ಬುರ್ಗಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಧಾರವಾಡದಲ್ಲಿ 14 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲೇ ಹೆಚ್ಚು ಮಂದಿ ಸಾವನ್ನಪ್ಪಿದ ಜಿಲ್ಲೆ ಎಂಬ ಕುಖ್ಯಾತಿಗೆ ಗುರಿಯಾಗಿದೆ. ಇಂದು ಬೆಳಗ್ಗೆ 8 ಗಂಟೆವರೆಗೆ ಸಂಗ್ರಹಿಸಲಾಗಿರುವ ಅಂಕಿ ಅಂಶಗಳ ಪ್ರಕಾರ ಕಪ್ಪು ಶಿಲೀಂಧ್ರದ ಜಿಲ್ಲಾವಾರು ಸೋಂಕಿನ ಮಾಹಿತಿ ಕೆಳಗಿನಂತಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ 70 ಮಂದಿ ಬ್ಲಾಕ್ ಫಂಗಸ್ ಗೆ ಸಿಲುಕಿದ್ದು, 69 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಬ್ಬರು ಮೃತ ಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಆರು ಮಂದಿಗೆ ಸೋಂಕು ತಗುಲಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಬೆಳಗಾವಿಯಲ್ಲಿ 47 ಮಂದಿಗೆ ಸೋಂಕು ತಗುಲಿದ್ದು, ಒಬ್ಬರು ಮೃತಪಟ್ಟು ಉಳಿದೆಲ್ಲರು ಗುಣಮುಖರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 20 ಮಂದಿಗೆ ಸೋಂಕು ತಗುಲಿದ್ದು, 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 557 ಮಂದಿಗೆ ಸೋಂಕು ತಗುಲಿದ್ದು 540 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, 11 ಮಂದಿ ಗುಣಮುಖರಾಗಿದ್ದಾರೆ, ಆರು ಮಂದಿ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯಲ್ಲಿ 18 ಮಂದಿಯ ಪೈಕಿ 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, ಒಬ್ಬರು ಗುಣಮುಖರಾಗಿ ಮತ್ತೊಬ್ಬರು ಮೃತಪಟ್ಟಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಒಂದು ಪ್ರಕರಣ ವರದಿಯಾಗಿದ್ದು, ಆ ರೋಗಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಪ್ರಕರಣ ವರದಿಯಾಗಿತ್ತು, ಅವರು ಗುಣಮುಖರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ 34 ಮಂದಿಗೆ ಸೋಂಕು ತಗುಲಿತ್ತು ಎಲ್ಲರೂ ಗುಣಮುಖರಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ 35 ಪ್ರಕರಣಗಳು ವರದಿಯಾಗಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ, 31 ಮಂದಿ ಚೇತರಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 26 ಪ್ರಕರಣಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಉಳಿದವರು ಗುಣಮುಖರಾಗಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ತವರು ಜಿಲ್ಲೆ ಧಾರವಾಡದಲ್ಲಿ 156 ಪ್ರಕರಣಗಳು ವರದಿಯಾಗಿವೆ, 14 ಮಂದಿ ಮೃತಪಟ್ಟಿದ್ದಾರೆ, 142 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯಕ್ಕೆ ಅಲ್ಲಿ ಈಗ ಯಾರು ಸೊಂಕಿಗೆ ಸಿಲುಕಿಲ್ಲ, ಗದಗ ಜಿಲ್ಲೆಯಲ್ಲಿ 11, ಹಾವೇರಿಯಲ್ಲಿ 11, ಮಂಡ್ಯದಲ್ಲಿ 3, ಮೈಸೂರಿನಲ್ಲಿ 35, ರಾಮನಗರದಲ್ಲಿ 3, ಉಡುಪಿಯಲ್ಲಿ 10, ವಿಯಜಪುರ ಜಿಲ್ಲೆಯಲ್ಲಿ 57 ಪ್ರಕರಣಗಳು ವರದಿಯಾಗಿದ್ದು ಎಲ್ಲರೂ ಗುಣಮುಖರಾಗಿ ಸುರಕ್ಷಿತವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕರಣೆ ತಿಳಿಸಿದೆ.

ಹಾಸನ ಜಿಲ್ಲೆಯಲ್ಲಿ 9 ಮಂದಿ ಸೋಂಕು ತಗುಲಿದ್ದು, ಮೂರು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲ್ಬುರ್ಗಿ ರಾಜ್ಯದಲ್ಲೆ ಹೆಚ್ಚು ಸೋಂಕು ಹೊಂದಿರುವ ಮೂರನೆ ಜಿಲ್ಲೆಯಾಗಿದ್ದು,104 ಮಂದಿ ಸೋಂಕಿತರಿದ್ದರು, 87 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 12 ಮಂದಿ ಗುಣಮುಖರಾಗಿದ್ದಾರೆ, ಐದು ಮಂದಿ ಸಾವನ್ನಪ್ಪಿದ್ದಾರೆ. ಕೋಲಾರದಲ್ಲಿ 43 ಮಂದಿ ಪೈಕಿ ಇಬ್ಬರು ಸಾವನ್ನಪ್ಪಿದ್ದು, 41 ಮಂದಿ ಗುಣಮುಖರಾಗಿದ್ದಾರೆ, ಕೊಪ್ಪಳ ಜಿಲ್ಲೆಯಲ್ಲಿ 16 ಮಂದಿ ಪೈಕಿ ಇಬ್ಬರು ಗುಣಮುಖರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ, 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಯಚೂರಿನಲ್ಲಿ 46 ಮಂದಿ ಪೈಕಿ ಒಬ್ಬರು ಮೃತಪಟ್ಟಿದ್ದು, ಉಳಿದವರು ಗುಣಮುಖರಾಗಿದ್ದಾರೆ, ಶಿವಮೊಗ್ಗದಲ್ಲಿ 38 ಮಂದಿ ಪೈಕಿ 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಐವರು ಮೃತಪಟ್ಟಿದ್ದಾರೆ, ತುಮಕೂರಿನಲ್ಲಿ 10 ಮಂದಿ ಪೈಕಿ ಒಂಬತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಗುಣಮುಖರಾಗಿದ್ದಾರೆ, ಉತ್ತರ ಕನ್ನಡ ಮೂರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾದಗಿರಿಯಲ್ಲಿ ಮೂರು ಮಂದಿ ಪೈಕಿ ಒಬ್ಬರು ಮೃತಪಟ್ಟು ಉಳಿದ್ದಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಔಷಧಿಯ ಕೊರತೆ:
ಬ್ಲಾಕ್ ಫಂಗಸ್ ಸೋಂಕಿಗೆ ಗುರಿಯಾದ ರೋಗಿಯ ಚಿಕಿತ್ಸೆಗೆ ಕನಿಷ್ಠ 70 ರಿಂದ 80 ಅಂಪೋಟೆರಿಸಿನ್ ಇಂಜೆಕ್ಷನ್ ಗಳ ಅಗತ್ಯ ಇವೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ 1292 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆಗೆ ಸರಿ ಸುಮಾರು ಒಂದು ಲಕ್ಷ ಅಂಪೊಟೆರಿಸನ್ ಬಿ ಇಂಜೆಕ್ಷನ್ ಗಳ ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರ ನಿನ್ನೆಯವರೆಗೆ ರಾಜ್ಯಕ್ಕೆ ಪೂರೈಕೆ ಮಾಡಿರುವುದು 12,710 ವೈಯಲ್ಸ್ ಗಳನ್ನು ಮಾತ್ರ.

ಮೇ 21ರಂದು 1270, ಮೇ 24ರಂದು 1030, ಮೇ 26ರಂದು 1220 ಮೇ 27ರಂದು 5190 ಹಾಗೂ ನಿನ್ನೆ ಹೊಸದಾಗಿ 1930 ವೈಯಲ್ಸಗಳನ್ನು ಸೇರಿ 10,640 ವೈಯಲ್ಸ್ ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೇ ನೀಡಿರುವ ಮಾಹಿತಿಯ ಪ್ರಕಾರ ಕರ್ನಾಟಕಕ್ಕೆ ನಿನ್ನೆಯವರೆಗೆ 12,710 ವೈಯಲ್ಸ್ ಗಳ ಪೂರೈಕೆಯಾಗಿದೆ. ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ ಇದೆ ಎಂದು ವೈದ್ಯರುಗಳೆ ಹೇಳಿಕೆ ನೀಡಲಾರಂಭಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img