Tuesday, June 15, 2021
Homeಅಂತರ್ ರಾಜ್ಯಹರಿಯಾಣದಲ್ಲಿ ಲಾಕ್‌ಡೌನ್ ವಿಸ್ತರಣೆ : ಜೂನ್ 15ರವರೆಗೆ ಶಿಕ್ಷಣ ಸಂಸ್ಥೆಗಳು ಬಂದ್

ಇದೀಗ ಬಂದ ಸುದ್ದಿ

ಹರಿಯಾಣದಲ್ಲಿ ಲಾಕ್‌ಡೌನ್ ವಿಸ್ತರಣೆ : ಜೂನ್ 15ರವರೆಗೆ ಶಿಕ್ಷಣ ಸಂಸ್ಥೆಗಳು ಬಂದ್

ಚಂಡೀಗಡ: ರಾಜ್ಯದಲ್ಲಿ ಜೂನ್ 7 ರವರೆಗೆ ಮತ್ತೊಂದು ವಾರ ಲಾಕ್‌ಡೌನ್ ವಿಸ್ತರಿಸಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಆದೇಶಿಸಿದ್ದಾರೆ.

‘ಕೋವಿಡ್ ಲಾಕ್‌ಡೌನ್ ಅನ್ನು ಜೂನ್ 7 ರವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ. ಶಿಕ್ಷಣ ಸಂಸ್ಥೆಗಳು ಜೂನ್ 15 ರವರೆಗೆ ಮುಚ್ಚಲ್ಪಡುತ್ತವೆ’ ಎಂದು ಅವರು ಹೇಳಿದರು.

ಹೊಸ ಲಾಕ್‌ಡೌನ್ ಮಾರ್ಗಸೂಚಿಗಳ ಪ್ರಕಾರ, ಅಂಗಡಿಗಳಿಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಬೆಸ-ಸಮ ಸೂತ್ರವನ್ನು ಅನುಸರಿಸಲು ಅಂಗಡಿಯವರಿಗೆ ತಿಳಿಸಲಾಗಿದೆ. ರಾತ್ರಿ ಕರ್ಫ್ಯೂ ಆದೇಶವು ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಇರುತ್ತದೆ.

ಹರಿಯಾಣದಲ್ಲಿ ಶನಿವಾರ ಹೊಸದಾಗಿ 1868 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 7,53,937ಕ್ಕೆ ಏರಿಕೆಯಾಗಿದೆ. ಸದ್ಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 23,094 ಆಗಿದ್ದರೆ, 7,22,711 ಜನರು ಈವರೆಗೆ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 8,132 ಕ್ಕೆ ಏರಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img