Tuesday, June 15, 2021
Homeಸುದ್ದಿ ಜಾಲಅನಾಥಾಶ್ರಮದಲ್ಲಿ ಕರೊನಾ ಮಹಾಸ್ಫೋಟ: 210 ಮಂದಿಗೆ ಸೋಂಕು ದೃಢ!

ಇದೀಗ ಬಂದ ಸುದ್ದಿ

ಅನಾಥಾಶ್ರಮದಲ್ಲಿ ಕರೊನಾ ಮಹಾಸ್ಫೋಟ: 210 ಮಂದಿಗೆ ಸೋಂಕು ದೃಢ!

ಬೆಳ್ತಂಗಡಿ: ತಾಲೂಕಿನ ಸಿಯೋನ್ ಆನಾಥಾಶ್ರಮದಲ್ಲಿ ಕರೊನಾ ಮಹಾಸ್ಫೋಟಗೊಂಡಿದೆ. ಆಶ್ರಮದಲ್ಲಿ 270 ಮಂದಿ ಇದ್ದರೆ ಅದರಲ್ಲಿ 210 ಮಂದಿಗೆ ಸೋಂಕು ದೃಢವಾಗಿದೆ.

ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲುನಲ್ಲಿ ಸಿಯೋನ್​ ಅನಾಥಾಶ್ರಮವಿದೆ. ಈ ಆಶ್ರಮದಲ್ಲಿ ಕೆಲವು ದಿನಗಳ ಹಿಂದೆ ಕೆಲವರಲ್ಲಿ ಸೋಂಕು ದೃಢವಾಗಿತ್ತು. ಆ ಹಿನ್ನೆಲೆಯಲ್ಲಿ ಶನಿವಾರದಂದು ಆಶ್ರಮದ ಪ್ರತಿಯೊಬ್ಬರನ್ನು ರ್ಯಾಂಡಮ್​ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 210 ಮಂದಿಗೆ ಸೋಂಕು ಇರುವುದು ಟೆಸ್ಟ್​ನಿಂದಾಗಿ ತಿಳಿದುಬಂದಿದೆ.

ಆಶ್ರಮದಲ್ಲಿರುವ ಬಹುತೇಕರು ವೃದ್ಧರು ಮತ್ತು ಮನೋರೋಗಿಗಳಾಗಿದ್ದಾರೆ. ಆಶ್ರಮದಲ್ಲಿರುವ ಸೋಂಕಿತರನ್ನು ಕೋವಿಡ್​ ಕೇರ್​ ಸೆಂಟರ್​ಗೆ ಶಿಫ್ಟ್​ ಮಾಡಲು ಶಾಸಕ ಹರೀಶ್​ ಪೂಂಜಾ ವ್ಯವಸ್ಥೆ ಮಾಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ದ ರಜತಾದ್ರಿ ವಸತಿ ಗೃಹವನ್ನು ಕೋವಿಡ್​ ಕೇರ್​ ಸೆಂಟರ್​ ಆಗಿ ಮಾಡಲಾಗಿದ್ದು, ಅಲ್ಲಿಗೆ ಸೋಂಕಿತರನ್ನು ಶಿಫ್ಟ್​ ಮಾಡಿರುವುದಾಗಿ ತಿಳಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img