Tuesday, June 15, 2021
Homeಸುದ್ದಿ ಜಾಲಬ್ಲಾಕ್ ಫಂಗಸ್ ಗೆ ರಾಜ್ಯದಲ್ಲಿ 39 ಜನರು ಬಲಿ; 1,250 ಮಂದಿಯಲ್ಲಿ ಸೋಂಕು ಪತ್ತೆ

ಇದೀಗ ಬಂದ ಸುದ್ದಿ

ಬ್ಲಾಕ್ ಫಂಗಸ್ ಗೆ ರಾಜ್ಯದಲ್ಲಿ 39 ಜನರು ಬಲಿ; 1,250 ಮಂದಿಯಲ್ಲಿ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ನಡುವೆ ಬ್ಲ್ಯಾಕ್ ಫಂಗಸ್ ಜನರ ಜೀವ ಹಿಂಡುತ್ತಿದ್ದು, 1250 ಜನರಲ್ಲಿ ಶಿಲೀಂದ್ರ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ 39 ಜನರು ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ಡೆತ್ ಆಡಿಟ್ ಮಾಡಿ ನಿಖರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಬ್ಲ್ಯಾಕ್ ಫಂಗಸ್ ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಇನ್ನೂ ದರ ನಿಗದಿಯಾಗಿಲ್ಲ. ಬ್ಲ್ಯಾಕ್ ಫಂಗಸ್ ಗೆ ರಾಜ್ಯಕ್ಕೆ ಔಷಧಿ ತರುವ ನಿಟ್ಟಿನಲ್ಲಿ ಸಚಿವ ಡಿ.ವಿ.ಸದಾನಂದಗೌಡ ಪ್ರಯತ್ನಿಸುತ್ತಿದ್ದಾರೆ. 8 ಕಂಪನಿಗಳ ಜೊತೆ ಮಾತನಾಡಲಾಗಿದೆ ಎಂದು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img