Monday, June 14, 2021
Homeಸುದ್ದಿ ಜಾಲಕೊರೋನಾ ಸಂಕಷ್ಟದ ನಡುವೆ ಎದುರಾಯ್ತು ಮತ್ತೊಂದು ಭಾರಿ ಸಮಸ್ಯೆ

ಇದೀಗ ಬಂದ ಸುದ್ದಿ

ಕೊರೋನಾ ಸಂಕಷ್ಟದ ನಡುವೆ ಎದುರಾಯ್ತು ಮತ್ತೊಂದು ಭಾರಿ ಸಮಸ್ಯೆ

ಇಡೀ ವಿಶ್ವವು ಕೊರೊನಾ ವಿರುದ್ಧ ಹೋರಾಟವನ್ನ ನಡೆಸುತ್ತಿರುವಾಗಲೇ ಸದ್ದಿಲ್ಲದೇ ಇನ್ನೊಂದು ಅಪಾಯವೊಂದು ಕಂಟಕಪ್ರಾಯವಾಗುತ್ತಿದೆ. ಹೊಸ ಅಧ್ಯಯನವೊಂದರ ಪ್ರಕಾರ 2019ರಲ್ಲಿ ಬರೋಬ್ಬರಿ 8 ಮಿಲಿಯನ್​ ಮಂದಿ ಧೂಮಪಾನದ ಚಟದಿಂದಾಗಿಯೇ ಅಸುನೀಗಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಈ ಸಂಖ್ಯೆಯು ಇನ್ನಷ್ಟು ಹೆಚ್ಚಾಗಿದೆ.

ಕಳೆದ ಒಂಬತ್ತು ವರ್ಷಗಳಲ್ಲಿ ಧೂಮಪಾನಿಗಳ ಸಂಖ್ಯೆ 150 ಮಿಲಿಯನ್​ಗೆ ಏರಿಕೆ ಕಂಡಿದೆ. ಅದರಲ್ಲೂ ಹದಿಹರೆಯದವರೇ ಹೆಚ್ಚಾಗಿ ಧೂಮಪಾನಿಗಳಾಗುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.

ಅಲ್ಲದೇ ಈ ಅಧ್ಯಯನ ನೀಡಿರುವ ಮಾಹಿತಿಯ ಪ್ರಕಾರ 25 ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಅನೇಕರು ಧೂಮಪಾನಿಗಳಾಗುತ್ತಿದ್ದಾರೆ.

ಧೂಮಪಾನವೆಂಬ ದುಶ್ಚಟಕ್ಕೆ ಹೆಚ್ಚಾಗಿ ಯುವಜನರೇ ಗುರಿಯಾಗುತ್ತಿದ್ದಾರೆ. ಪ್ರತಿಯೊಂದು ದೇಶವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ವರ್ಷಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಧ್ಯಯನದ ಮುಖ್ಯ ಲೇಖಕಿ ಮರಿಸ್ಸಾ ರಿಟ್ಸ್​ಮಾ ಹೇಳಿದ್ದಾರೆ.

ವಿಶ್ವದ 20 ರಾಷ್ಟ್ರಗಳಲ್ಲಿ ಪುರುಷ ಧೂಮಪಾನಿ ಹಾಗೂ 12 ರಾಷ್ಟ್ರಗಳಲ್ಲಿ ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಚೀನಾ ಅತೀ ಹೆಚ್ಚು ಧೂಮಪಾನಿಗಳನ್ನ ಹೊಂದಿರುವ ರಾಷ್ಟ್ರವಾಗಿದೆ. ಇದಾದ ಬಳಿಕ ಭಾರತ, ಇಂಡೋನೇಷಿಯಾ, ರಷ್ಯಾ , ಅಮೆರಿಕ, ಬಾಂಗ್ಲಾದೇಶ, ಜಪಾನ್​, ಟರ್ಕಿ, ವಿಯೆಟ್ನಾಂ ಹಾಗೂ ಫಿಲಿಫೈನ್ಸ್​ ಮುಂದಿನ ಸ್ಥಾನಗಳನ್ನ ಹಂಚಿಕೊಂಡಿವೆ.

ಸರ್ಕಾರಗಳು ಶೀಘ್ರದಲ್ಲೇ ಧೂಮಪಾನ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಪರಿಣಾಮಕಾರಿ ದಾರಿಯನ್ನ ಹುಡುಕಬೇಕಿದೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. 30 ವರ್ಷದ ಒಳಗೆ ಧೂಮಪಾನ ಚಟ ಕಲಿಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಚಟಕ್ಕೆ ಗುರಿಯಾಗೋ ಸಾಧ್ಯತೆ ತುಂಬಾನೇ ಕಡಿಮೆ ಎಂದು ಅಧ್ಯಯನ ಹೇಳಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img