Tuesday, June 15, 2021
Homeಸುದ್ದಿ ಜಾಲ'SSLC,PUC ವಿದ್ಯಾರ್ಥಿ'ಗಳನ್ನು ಪರೀಕ್ಷೆಯಿಲ್ಲದೇ ಪಾಸ್ ಮಾಡಿ:ವಾಟಾಳ್ ನಾಗರಾಜ್ ಒತ್ತಾಯ

ಇದೀಗ ಬಂದ ಸುದ್ದಿ

‘SSLC,PUC ವಿದ್ಯಾರ್ಥಿ’ಗಳನ್ನು ಪರೀಕ್ಷೆಯಿಲ್ಲದೇ ಪಾಸ್ ಮಾಡಿ:ವಾಟಾಳ್ ನಾಗರಾಜ್ ಒತ್ತಾಯ

ಬೆಂಗಳೂರು : ಕೊರೋನಾ ಸೋಂಕಿನ ಆರ್ಭಟದ ನಡುವೆಯೂ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಸೋಂಕಿನ ಇಳಿಕೆಯ ನಂತ್ರ, ನಡೆಸೋದಕ್ಕೆ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿರುವಂತ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್, ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡುವಂತೆ ಆಗ್ರಹಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್, ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಜೊತೆಗೆ ಆಟ ಆಡುತ್ತಿದೆ. ಕೊರೋನಾ ಸೋಂಕಿನ ಆರ್ಭಟದ ಸಂದರ್ಭದಲ್ಲಿಯೂ ಪರೀಕ್ಷೆ ನಡೆಸೋ ಆಲೋಚನೆ ಮಾಡಿರೋದು ದುರದೃಷ್ಠಕರ. ವಿದ್ಯಾರ್ಥಿಗಳ ಆರೋಗ್ಯದ ಜೊತೆಗೆ ಚೆಲ್ಲಾಟ ಆಡಬಾರದು ಎಂದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತೆರೆ ಮರೆಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಬಗ್ಗೆ ಮಾತನಾಡಿಕೊಳ್ಳೋದು ಬಿಟ್ಟು, ನೇರಾ ನೇರ ಮಾತನಾಡಬೇಕು. ವಿದ್ಯಾರ್ಥಿಗಳಿಗೂ ಪರೀಕ್ಷೆಯ ಬಗ್ಗೆ ಗೊಂದರವನ್ನು ಪರಿಹರಿಸಬೇಕು. ಕೊರೋನಾ ಸೋಂಕಿನ ಈ ಸಂದರ್ಭದಲ್ಲಿ ಪರೀಕ್ಷೆ ನಡೆಸೋದನ್ನು ಬಿಟ್ಟು ಪರೀಕ್ಷೆ ಇಲ್ಲದೇ ಪಾಸ್ ಮಾಡುವಂತೆ ಆಗ್ರಹಿಸಿದ್ದಾರೆ.

ಇನ್ನೂ ಕೊರೋನಾ ರಾಜ್ಯದಲ್ಲಿ ಆರ್ಭಟಿಸುತ್ತಿದೆ. ಈ ಸಂದರ್ಭದಲ್ಲಿಯೇ ಪರೀಕ್ಷೆ ನಡೆಸೋದು ಸೂಕ್ತವಿಲ್ಲ. ಒಂದು ವೇಳೆ ಸರಿಯಾದ ನಿರ್ಧಾರವನ್ನು ಸರ್ಕಾರ ಪ್ರಕಟಿಸದೇ ಇದ್ದರೇ.. ಜೂನ್ 1ರಿಂದ ವಿದ್ಯಾರ್ಥಿಗಳ ಮೂಲಕ ಮನೆಯಲ್ಲಿಯೇ ಇದ್ದು ಪ್ರತಿಭಟನೆ ನಡೆಸಲಾಗುತ್ತದೆ. ಅದಕ್ಕೂ ಮುನ್ನವೇ ಸರ್ಕಾರ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸದೇ, ಪಾಸ್ ಮಾಡುವಂತೆ ಒತ್ತಾಯಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img