Tuesday, June 15, 2021
Homeಅಂತರ್ ರಾಜ್ಯಉತ್ತರ ಪ್ರದೇಶ: ನಕಲಿ ಮದ್ಯ ಸೇವಿಸಿ 8 ಮಂದಿ ಸಾವು

ಇದೀಗ ಬಂದ ಸುದ್ದಿ

ಉತ್ತರ ಪ್ರದೇಶ: ನಕಲಿ ಮದ್ಯ ಸೇವಿಸಿ 8 ಮಂದಿ ಸಾವು

ಅಲಿಗಢ: ‘ಉತ್ತರ ಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ ಎಂಟು ಮಂದಿ ಶುಕ್ರವಾರ ಮೃತಪಟ್ಟಿದ್ದು, ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಕಾರ್ಸಿಯಾದಲ್ಲಿ ಪರವಾನಗಿ ಹೊಂದಿದ್ದ ಮದ್ಯ ಮಾರಾಟಗಾರನೊಬ್ಬನಿಂದ ಖರೀದಿಸಿದ ಮದ್ಯ ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಲೂಧಾ ಪೊಲೀಸರು ತಿಳಿಸಿದ್ದರು. ಆದರೆ ಹಿರಿಯ ಜಿಲ್ಲಾ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ ವೇಳೆ ಇನ್ನೂ ಆರು ಮಂದಿ ಸಾವಿಗೀಡಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಇವರೆಲ್ಲರೂ ಟ್ರಕ್‌ ಚಾಲಕರಾಗಿದ್ದರು’ ಎಂದು ಡಿಐಜಿ ದೀಪಕ್‌ ಕುಮಾರ್‌ ಹೇಳಿದ್ದಾರೆ.

‘ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮದ್ಯದ ಅಂಗಡಿಯನ್ನು ಸೀಲ್‌ಡೌನ್‌ ಮಾಡಿದ್ದು, ಮದ್ಯದ ಮಾದರಿಗಳನ್ನು ಸಂಗ್ರಹಿಸಲಾಗಿದೆ’ ಎಂದು ಅವರು ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img