Monday, June 14, 2021
Homeಸುದ್ದಿ ಜಾಲಭೀಕರ ಅಪಘಾತ: ಹಾಲಿವುಡ್ ನಟ ಕೆವಿನ್ ಕ್ಲಾರ್ಕ್ ನಿಧನ

ಇದೀಗ ಬಂದ ಸುದ್ದಿ

ಭೀಕರ ಅಪಘಾತ: ಹಾಲಿವುಡ್ ನಟ ಕೆವಿನ್ ಕ್ಲಾರ್ಕ್ ನಿಧನ

ಚಿಕಾಗೊ: ಸ್ಕೂಲ್ ಆಫ್ ರಾಕ್’ ಸಿನಿಮಾ ಖ್ಯಾತಿಯ ಹಾಲಿವುಡ್ ನಟ, ಸಂಗೀತಗಾರ ಕೆವಿನ್ ಕ್ಲಾರ್ಕ್ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.

ಬುಧವಾರ ಮೇ 26ರಂದು ಬೆಳಗ್ಗೆ ಅಮೆರಿಕದ ಚಿಕಾಗೊ ಬೀದಿಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಕೆವಿನ್ ಕಾರಿಗೆ ಡಿಕ್ಕಿ ಹೊಡೆದ್ದಾರೆ, ತಕ್ಷಣ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕೆವಿನ್ ಕಾರಿನ ಕೆಳಗೆ ಸಿಲುಕಿಕೊಂಡಿದ್ದರು. ತಕ್ಷಣವನ್ನು ಆಸ್ಪತ್ರೆಗೆ ಕರೆದೊಯ್ಯಲಾಯುತು. ಆದರೆ ಸ್ವಲ್ಪ ಸಮಯದಲ್ಲೇ ಕೆವಿನ್ ನಿಧನಹೊಂದಿದರು ಎಂದು ಕೆವಿನ್ ಸಾವಿನ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಕಾರು ಚಲಾಯಿಸುತ್ತಿದ್ದ 20 ವರ್ಷ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರಂತೆ. ಆದರೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲವಂತೆ. ಕೆವಿನ್ 2003ರಲ್ಲಿ ಬಿಡುಗೆಯಾಗಿದ್ದ ಸ್ಕೂಲ್ ಆಫ್ ರಾಕ್ ಚಿತ್ರದಲ್ಲಿ ಶಾಲಾ ಬಾಲಕನ ಪಾತ್ರದಲ್ಲಿ ನಟಿಸಿದ್ದರು.

ಕೆವಿನ್ ನಿಧನದಿಂದ ಸ್ಕೂಲ್ ಆಫ್ ರಾಕ್ ನ ಸಹ ನಟ ಜ್ಯಾಕ್ ಬ್ಲಾಕ್ ಆಘಾತಗೊಂಡಿದ್ದು, ‘ಕೆವಿನ್ ಇನ್ನಿಲ್ಲ. ಇಷ್ಟು ಬೇಗ ಯಾಕೆ ಹೋದೆ. ಅದ್ಭುತವಾದ ವ್ಯಕ್ತಿ. ಎಷ್ಟು ನೆನಪುಗಳು. ಹೃದಯ ಛಿದ್ರವಾಗಿದೆ. ಅವರ ಕುಟುಂಬ ಮತ್ತು ಸ್ಕೂಲ್ ಆಫ್ ರಾಕ್ ತಂಡಕ್ಕೆ ನನ್ನ ಪ್ರೀತಿ ಕಳುಹಿಸುತ್ತೇನೆ’ ಎಂದಿದ್ದಾರೆ.

ಕೆವಿನ್ ಕ್ಲಾರ್ಕ್ ನಟ ಮಾತ್ರವಲ್ಲದೆ ಗಾಯಕ ಕೂಡ ಹೌದು. ಡ್ರಮ್, ಕೀಬೋರ್ಡ್ ಮತ್ತು ಗಿಟಾರ್ ಕೂಡ ನುಡಿಸುತ್ತಿದ್ದರು. ಸ್ಕೂಲ್ ಆಫ್ ರಾಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತಾದರೂ ಸಂಗೀತದಲ್ಲಿ ಕೆವಿನ್ ಅಪಾರ ಆಸಕ್ತಿ ಹೊಂದಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img