Tuesday, June 15, 2021
Homeಸುದ್ದಿ ಜಾಲಆಂಧ್ರ ಪ್ರದೇಶದ ಎಚ್ ಪಿ ಸಿ ಎಲ್ ಘಟಕದಲ್ಲಿ ಬೆಂಕಿ ಅವಘಡ..!

ಇದೀಗ ಬಂದ ಸುದ್ದಿ

ಆಂಧ್ರ ಪ್ರದೇಶದ ಎಚ್ ಪಿ ಸಿ ಎಲ್ ಘಟಕದಲ್ಲಿ ಬೆಂಕಿ ಅವಘಡ..!

  ವಿಶಾಖಪಟ್ಟಣಂಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಹಿಂದುಸ್ತಾನ್​ ಪೆಟ್ರೋಲಿಯಂ ಕಾರ್ಪೋರೇಶನ್​​ ಲಿಮಿಟೆಡ್(ಎಚ್ ಪಿ ಸಿ ಎಲ್) ನಲ್ಲಿ ​ ಇಂದು(ಮಂಗಳವಾರ, ಮೇ 25) ಮಧ್ಯಾಹ್ನ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಸ್ಥಳಕ್ಕೆ ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಅಲ್ಲಿದ್ದ ಎಲ್ಲ ಕೆಲಸಗಾರರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿರುವುದಾಗಿ ವರದಿಯಾಗಿದೆ.

ವಿಶಾಖಪಟ್ಟಣಂನಲ್ಲಿರುವ ಎಚ್ ​​ಪಿ ಸಿ ಎಲ್​ ಘಟಕದಲ್ಲಿ ಏನೋ ಸ್ಫೋಟಗೊಂಡ ಶಬ್ದ ಕೇಳಿಬಂತು. ಅದರ ಬೆನ್ನಲ್ಲೇ ಭಾರೀ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇನ್ನು, ಭಾರಿ ಪ್ರಮಾಣದಲ್ಲಿ ಬೆಂಕಿ ಕಾನಿಸಿಕೊಂಡ ಸಂದರ್ಭದಲ್ಲಿ ಸುಮಾರು 6 ಮಂದಿ ಘಟಕದೊಳಗೆ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಆ ಆರು ಮಂದಿಯನ್ನೂ ಕೂಡ ಸುರಕ್ಷಿತವವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಎಚ್​ ಪಿ ಸಿ ಎಲ್ ​ನ ಕಚ್ಚಾ ಶುದ್ಧೀಕರಣ ಘಟಕದ ಪೈಪ್ ​​ಲೈನ್ ​ ಸ್ಫೋಟಗೊಂಡ ಕಾರಣ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿಯಲು ಕಾರಣ ಎಂದು ಸ್ಥಳೀಯ ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಿಂದಾಗಿ ಯಾವುದೇ ಸಾವು ನೋವುಗಳಾಗಿಲ್ಲವೆಂದು ಅಲ್ಲಿನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆಂದು ವರದಿ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img