Tuesday, June 15, 2021
Homeಸುದ್ದಿ ಜಾಲಆಂಧ್ರಪ್ರದೇಶದ ನದಿಯಲ್ಲಿ ಮುಳುಗಿದ ದೋಣಿ; ಮೂವರು ಸಾವು, 6 ಜನರು ನಾಪತ್ತೆ

ಇದೀಗ ಬಂದ ಸುದ್ದಿ

ಆಂಧ್ರಪ್ರದೇಶದ ನದಿಯಲ್ಲಿ ಮುಳುಗಿದ ದೋಣಿ; ಮೂವರು ಸಾವು, 6 ಜನರು ನಾಪತ್ತೆ

ವಿಶಾಖಪಟ್ಟಣಂ (ಮೇ 25): ನೆರೆಯ ರಾಜ್ಯವಾದ ಆಂಧ್ರಪ್ರದೇಶ ಮತ್ತು ಒರಿಸ್ಸಾ ಗಡಿಯಲ್ಲಿರುವ ಸಿಲೇರು ನದಿಯಲ್ಲಿ 2 ನಾಡದೋಣಿಗಳು ಮುಳುಗಡೆಯಾಗಿವೆ. ಈ ದುರಂತದಲ್ಲಿ ಒಂದು ಮಗು ಸೇರಿ ಮೂವರು ಸಾವನ್ನಪ್ಪಿದ್ದು, 6 ಜನರು ನಾಪತ್ತೆಯಾಗಿದ್ದಾರೆ. ಇಂದು ಮುಂಜಾನೆ ಈ ಘಟನೆ ನಡೆದಿದೆ. ಆಂಧ್ರಪ್ರದೇಶ ಸರ್ಕಾರದಿಂದ ತನಿಖೆಗೆ ಆದೇಶಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ.

ಬುಡಕಟ್ಟು ಜನಾಂಗದ ಜನರು, ವಲಸಿಗ ಕಾರ್ಮಿಕರು ಹೈದರಾಬಾದ್​ನಿಂದ ಒರಿಸ್ಸಾದ ಕೊಂಡುಗುಡ ಎಂಬ ತಮ್ಮ ಹಳ್ಳಿಗೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ನಡೆದಿದೆ. ದೋಣಿ ಮಗುಚಿದ ಕೂಡಲೇ ಕೆಲವಾರು ಮಂದಿ ನದಿಗೆ ಹಾರಿ ಈಜಿ ದಡ ಸೇರಿದ್ದಾರೆ. ಆಂಧ್ರಪ್ರದೇಶ ಮತ್ತು ಒರಿಸ್ಸಾದಲ್ಲಿ ಕೋವಿಡ್ ಕರ್ಫ್ಯೂ ವಿಧಿಸಿದ್ದರಿಂದ ರಸ್ತೆ ಮಾರ್ಗದ ಬದಲಾಗಿ ನದಿಯ ಮೂಲಕ ಅವರು ತಮ್ಮ ಊರುಗಳಿಗೆ ಹೊರಟಿದ್ದರು ಎನ್ನಲಾಗಿದೆ. ಆದರೆ, ಅವರಲ್ಲಿ 8 ಮಂದಿ ನೀರಿನಲ್ಲಿ ಮುಳುಗಿದ್ದು, ಇನ್ನೂ ಅವರ ಪತ್ತೆಯಾಗಿಲ್ಲ. ಒಂದು ಮಗುವಿನ ಶವ ಮಾತ್ರ ಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿದವರಿಗಾಗಿ ಹುಡುಕಾಟ ಮುಂದುವರೆದಿದೆ.

ದೋಣಿಯಲ್ಲಿದ್ದವರಲ್ಲಿ ಬಹುತೇಕರು ಕೂಲಿ ಕಾರ್ಮಿಕರಾಗಿದ್ದರು. ನಾಲ್ವರು ಈಜಿ ದಡ ಸೇರಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ಎರಡು ದೋಣಿಗಳಲ್ಲಿ ಒಟ್ಟು 13 ಜನ ಪ್ರಯಾಣ ಮಾಡುತ್ತಿದ್ದರು. ಇವರೆಲ್ಲ ಹೈದರಾಬಾದ್‌ನಲ್ಲಿ ಕೂಲಿ‌ ಕೆಲಸ ಮಾಡುತ್ತಿದ್ದರು. ಆದರೆ ಕೋವಿಡ್ ಕರ್ಫ್ಯೂದಿಂದ ಒರಿಸ್ಸಾದಲ್ಲಿದ್ದ ತಮ್ಮ ಗ್ರಾಮಕ್ಕೆ ವಾಪಾಸ್ ಹೊರಟಿದ್ದರು.

ಅವರೆಲ್ಲರೂ ದೋಣಿಯಲ್ಲಿ ಕುಳಿತು ಅರ್ಧ ನದಿಯವರೆಗೆ ಬರುತ್ತಿದ್ದಂತೆ ಒಂದು ದೋಣಿ ಮುಳುಗಿದೆ. ಈ ವೇಳೆ ಮುಳುಗಿದ ದೋಣಿಯಲ್ಲಿದ್ದ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಎರಡನೇ ದೋಣಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆಗ ಎರಡನೇ ದೋಣಿಯೂ ಮುಳುಗಿದೆ. ಎರಡೂ ದೋಣಿಯಲ್ಲಿದ್ದ ಒಟ್ಟು 13 ಜನರ ಪೈಕಿ ನಾಲ್ವರು ಈಜಿ ದಡವನ್ನು ಸೇರಿ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.

ಬೆಳಗ್ಗೆ ಸಿಲೇರು ನದಿಯಲ್ಲಿ 10 ತಿಂಗಳ ಮಗುವಿನ ಶವ ಪತ್ತೆಯಾಗಿತ್ತು. ಮಧ್ಯಾಹ್ನದ ವೇಳೆಗೆ ಇನ್ನಿಬ್ಬರ ಶವ ಪತ್ತೆಯಾಗಿದೆ. ಇನ್ನೂ 6 ಮಂದಿ ನಾಪತ್ತೆಯಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img