Monday, June 14, 2021
Homeಸುದ್ದಿ ಜಾಲಮಹಾರಾಷ್ಟ್ರದ 248 ಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆ!

ಇದೀಗ ಬಂದ ಸುದ್ದಿ

ಮಹಾರಾಷ್ಟ್ರದ 248 ಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆ!

ಎರಡನೇ ಅಲೆ ಕೊರೋನಾ ಸೋಂಕಿನಿಂದ ಪಾರಾಗಿರುವ ಮುಂಬೈ, ರಾಜಸ್ಥಾನದಲ್ಲಿ ಮೂರನೇ ಅಲೆ ಸೋಂಕು ಆತಂಕ ಸೃಷ್ಟಿಸಿದೆ. ಬಿಗಿ ಕಟ್ಟು ನಿಟ್ಟಿನ ಕ್ರಮದ ಮೂಲಕ ಎರಡನೇ ಅಲೆ ಕೋವಿಡ್​ ಸೋಂಕನ್ನು ತಹಬಂದಿಗೆ ತಂದಿದ್ದ ಮಹಾರಾಷ್ಟ್ರದಲ್ಲಿ ಈಗ ಮಕ್ಕಳಲ್ಲಿ ಕೂಡ ಕೊರೋನಾ ಸೋಂಕು ಕಂಡು ಬಂದಿದ್ದು, ಇದು ಮೂರನೇ ಅಲೆ ಸೋಂಕಿನ ಪರಿಣಾಮ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಮಹಾರಾಷ್ಟ್ರದ ಅಹಮ್ದ್​ನಗರದಲ್ಲಿ 248 ಮಕ್ಕಳಲ್ಲಿ ಕೋವಿಡ್​ ಸೋಂಕು ಕಂಡು ಬಂದಿದೆ. ಇದೇ ರೀತಿ ಆತಂಕದ ವಾತಾವರಣ ರಾಜಸ್ಥಾನದಲ್ಲಿ ಕೂಡ ಕಂಡು ಬಂದಿದೆ. ರಾಜಸ್ಥಾನದ ಡುಂಗರಪುರದಲ್ಲಿ 325 ಮಕ್ಕಳಲ್ಲಿ ಕೋವಿಡ್​ ದೃಢಗೊಂಡಿದ್ದು. ಕಳವಳ ಮೂಡಿಸಿದೆ.

ರಾಜಸ್ಥಾನದ ದೌಸಾ ಮತ್ತು ಡುಂಗರಪುರಲ್ಲಿ ಕಳೆದ ಮೂರು ವಾರಗಳಿಂದ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ಸುಮಾರು 600ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೋನಾ ಸೋಂಕು ದೃಢಗೊಂಡಿದೆ. ಬಹುತೇಕ ಮಕ್ಕಳಲ್ಲಿ ಲಕ್ಷಣ ರಹಿತ ಸೋಂಕು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರನೇ ಅಲೆ ಕೊರೋನಾ ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂದು ಈಗಾಗಲೇ ತಜ್ಫರು ಎಚ್ಚರಿಸಿದ್ದು ಅದರಂತೆ ಈ ಪ್ರಕರಣಗಳು ಕಂಡಿ ಬಂದಿವೆ ಎಂದಿದ್ದಾರೆ.

ಇನ್ನು ಈ ಕುರಿತು ಪಿಟಿಐಗೆ ಸಂದರ್ಶನ ನೀಡಿರುವ ಕೋವಿಡ್​ ಕಾರ್ಯಕಾರಿ ಗುಂಪಿ ಅಧ್ಯಕ್ಷ ಡಾ ಎನ್​ ಕೆ ಆರೋರ, ಭಾರತೀಯ ದತ್ತಾಂಶ ನಿರ್ಧಿಷ್ಟ ಮುನ್ಸೂಚನೆ ನೀಡುವುದಿಲ್ಲ, ಪ್ರಸ್ತುತ ಸೋಂಕಿನ ತಳಿಯು ಯುವಕರು ಮತ್ತು ಮಕ್ಕಳಿಗೆ ತಗಲುವ ಸಾಧ್ಯತೆ ಇದೆ. ಈ ಎರಡು ಗುಂಪಿನವರಲ್ಲಿ ಸೋಂಕಿನ ಪ್ರಕರಣ ಹೆಚ್ಚಾದಲ್ಲಿ ಗಮನಕ್ಕೆ ಬರಲಿದೆ ಎಂದಿದ್ದಾರೆ.

ಇದೇ ವೇಳೆ ಮಕ್ಕಳಲ್ಲಿ ಸೋಂಕು ಕಂಡು ಬಂದಲ್ಲಿ ಅವರಿಗೆ ಕೋವಿಡ್​ 19 ಸೇವೆಯ ಅಗತ್ಯವನ್ನು ಹೆಚ್ಚಿಸುವ ಅವಶ್ಯಕತೆ ಇದೆ. ನವಜಾತ ಶಿಶುಗಳು, ಮಕ್ಕಳು ಮತ್ತು ಗರ್ಭಿಣಿಯರಿಗೆ ಹೆಚ್ಚಿನ ಚಿಕಿತ್ಸೆಯ, ಆರೈಕೆಯ ಅವಶ್ಯಕತೆ ಇದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೋಂಕಿತ ಮಕ್ಕಳ ಆರೈಕೆ ವೇಳೆ ಪೋಷಕರ ಜೊತೆ ಕೂಡ ಅವಶ್ಯಕತ. ಅದೇ ರೀತಿ ಸೋಂಕಿತ ಗರ್ಭಿಣಿಯರಿಗೆ ಅವಧಿ ಪೂರ್ವ ಹೆರಿಗೆ ಮಾಡಬೇಕಾಗುತ್ತದೆ. ಈಗಾಗಲೇ ಚಿಕಿತ್ಸೆಗೆ ಸಿದ್ದ ಪಡಿಸಿರುವ ಮಾರ್ಗಸೂಚಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

ತಜ್ಞರ ಮುನ್ಸೂಚನೆಯಂತೆ ಈಗಾಗಲೇ ಮೂರನೇ ಅಲೆಗೆ ಕೆಲ ರಾಜ್ಯಗಳು ಸಿದ್ಧತೆ ನಡೆಸಿದ್ದುಮ, ಮಕ್ಕಳ ಕೋವಿಡ್​ ಕೇರ್​ ಕೇಂದ್ರಗಳನ್ನು ನಿರ್ಮಿಸಿದೆ. ಮಧ್ಯ ಪ್ರದೇಶ ಸೇರಿದಂತೆ ಮಹಾರಾಷ್ಟ್ರದಲ್ಲಿ ಮಕ್ಕಳ ಕೇಂದ್ರ ಸ್ಥಾಪನೆ ಮಾಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img