Monday, June 14, 2021
Homeಸುದ್ದಿ ಜಾಲಯುವಕನ ಮೊಬೈಲ್​ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ: ಕಾರಣವೇನು ಗೊತ್ತೇ ?

ಇದೀಗ ಬಂದ ಸುದ್ದಿ

ಯುವಕನ ಮೊಬೈಲ್​ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ: ಕಾರಣವೇನು ಗೊತ್ತೇ ?

ರಾಯ್ಪುರ್​: ಲಾಕ್​ಡೌನ್​ ನಡುವೆ ಕೆಲ ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಯುವಕನ ಮೊಬೈಲ್​ ಒಡೆದು ಹಾಕಿದಲ್ಲದೆ, ಕಪಾಳಕ್ಕೂ ಬಾರಿಸಿ, ಜಿಲ್ಲಾಧಿಕಾರಿ ಅಮಾನವೀಯ ವರ್ತಿಸಿದ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.

ಇಷ್ಟೇ ಅಲ್ಲದೆ, ಸ್ಥಳದಲ್ಲಿದ್ದ ಪೊಲೀಸ್​ ಸಿಬ್ಬಂದಿಯನ್ನು ಕರೆದು ಥಳಿಸುವಂತೆ ಹೇಳಿ ಎಫ್​ಐಆರ್​ ದಾಖಲಿಸಲು ಆದೇಶಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜಿಲ್ಲಾಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆ ಛತ್ತೀಸ್​ಗಢದ ಸುರಾಜ್​ಪುರ್​ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ರಣ್ಬೀರ್​ ಶರ್ಮಾ ಯುವಕನ ಮೊಬೈಲ್​ ಪಡೆದು ರಸ್ತೆಯ ಮೇಲೆ ಜೋರಾಗಿ ಎಸೆದು ಒಡೆದು ಹಾಕುವುದು ವಿಡಿಯೋದಲ್ಲಿ ದಾಖಲಾಗಿದೆ.

ಲಾಕ್​ಡೌನ್​ನಲ್ಲಿ ನಾನೇಕೆ ಆಚೆ ಬಂದೆ ಎಂಬುದನ್ನು ಆ ಯುವಕ ಕೆಲವು ಪತ್ರಗಳನ್ನು ತೋರಿಸಿ ವಿವರಣೆ ನೀಡುವ ಪ್ರಯತ್ನ ಮಾಡಿದಾದರೂ ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದೆ ದಿಢೀರನೇ ಯುವಕನ ಕೆನ್ನೆಗೆ ಜಿಲ್ಲಾಧಿಕಾರಿ ಬಾರಿಸಿಯೇ ಬಿಟ್ಟರು.

ಇದಾದ ಬಳಿಕ ಕೆಲವು ಪೊಲೀಸ್​ ಸಿಬ್ಬಂದಿಗಳನ್ನು ಕರೆಯಿಸಿ ಥಳಿಸಲು ಹೇಳಿದರು. ಸಿಬ್ಬಂದಿ ಥಳಿಸುವಾಗ ‘ಸರಿಯಾಗಿ ಬಾರಿಸಿ’ ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.

ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಂತಾರಾಜ್ಯ ಮಂಡಳಿ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಸಂಜಿವ್​ ಗುಪ್ತ, ಜಿಲ್ಲಾಧಿಕಾರಿಗಳ ನಡೆಯು ಹೇಯ ಮತ್ತು ಐಎಎಸ್​ ಅಧಿಕಾರಿಯಾಗಲು ನಾಲಾಯಕ್​ ಎಂದು ಟೀಕಿಸಿದ್ದಾರೆ. ಈ ವಿಚಾರವನ್ನು ಛತ್ತೀಸ್​ಗಢದ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದಾರೆ.

ಯುವಕನ ವಿರುದ್ಧ ಅತಿವೇಗದ ಚಾಲನೆ ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ, ಆ ಯುವಕ ಅಪ್ರಾಪ್ತನಲ್ಲ. ಆತನಿಗೆ 23 ವರ್ಷ ವಯಸ್ಸಾಗಿದೆ. ಅತಿಯಾದ ವೇಗದಲ್ಲಿ ಬೈಕ್​ ಚಾಲನೆ ಮಾಡುತ್ತಿದ್ದ ಮತ್ತು ಲಾಕ್​ಡೌನ್​ ಸಂದರ್ಭದಲ್ಲಿ ಏಕೆ ಹೊರ ಬಂದೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವನ್ನು ಸಹ ನೀಡಲಿಲ್ಲ ಎಂದು ಹೇಳಿದ್ದಾರೆ.

ಪೊಲೀಸರು ವಿಚಾರಿಸಲು ಮಧ್ಯ ಪ್ರವೇಶಿಸಿದ ಸಂದರ್ಭದಲ್ಲಿ ಬೈಕ್​ನಲ್ಲಿ ವೇಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ. ಪ್ರಶ್ನಿಸಿದಾಗ ಗೊಂದಲು ಉಂಟಾಗುವಂತಹ ಎರಡು ರೀತಿಯ ಉತ್ತರ ನೀಡಿದನು ಎಂದು ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img