Monday, June 14, 2021
Homeಸುದ್ದಿ ಜಾಲಛಾಯಾಗ್ರಾಹಕ, ವೀಡಿಯೋಗ್ರಾಫರ್‌ಗಳ ಬದುಕನ್ನೇ ಕಿತ್ತುಕೊಂಡ ಕೊರೊನಾ

ಇದೀಗ ಬಂದ ಸುದ್ದಿ

ಛಾಯಾಗ್ರಾಹಕ, ವೀಡಿಯೋಗ್ರಾಫರ್‌ಗಳ ಬದುಕನ್ನೇ ಕಿತ್ತುಕೊಂಡ ಕೊರೊನಾ

ಮದುವೆ ಹಾಗೂ ಇನ್ನಿತರೆ ಶುಭ ಸಮಾರಂಭಗಳ ಫೋಟೋ ಹಾಗೂ ವೀಡಿಯೋಚಿತ್ರೀಕರಣ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಗಳ ಕುಟುಂಬ ಕೋವಿಡ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು ಛಾಯಾಗ್ರಾಹಕರ ಮತ್ತು ವೀಡಿಯೋಗ್ರಾಫರ್‌ಗಳ ಬದುಕನ್ನೇ ಕಿತ್ತುಕೊಂಡಿದೆ.

ಅಲ್ಲದೆ ಕೆಲಸವಿಲ್ಲದೇ ಇತ್ತ ಸ್ಟುಡಿಯೋ ಬಾಡಿಗೆಯನ್ನೂ ಕಟ್ಟಲಾಗದೆ, ಸಾಲ ಮಾಡಿ ಖರೀದಿಸಿದ ಕ್ಯಾಮೆರಾ ಸಾಲವನ್ನೂ ತೀರಿಸಲಾಗದೆ ಹಾಗೂ ಜೀವನ ನೆಡೆಸಲು ಆಗದೆ ಸಂಕಷ್ಟದ ಸ್ಥಿತಿಯುಂಟಾಗಿದೆ. ಲಾಕ್‌ ಡೌನ್‌ ಸಂಕಷ್ಟದಲ್ಲಿಯೂ ಸಹ ಸರಕಾರವು ಫೋಟೋ ಮತ್ತು ವೀಡಿಯೋಗ್ರಾಫರ್‌ಗಳಿಗೆ ಪ್ಯಾಕೇಜ್‌ ನೀಡದೆ ಕಡೆಗಣಿಸಿದೆ.

ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಛಾಯಾಗ್ರಹಣ ಮತ್ತು ವೀಡಿಯೋ ಚಿತ್ರೀಕರಣವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ಬ್ಯಾಂಕ್‌ ಸಾಲ ಮಾಡಿಕೊಂಡು ಅತ್ಯಾಧುನಿಕ ಕ್ಯಾಮೆರಾಗಳನ್ನು ಖರೀದಿಸಿ ಸ್ಟುಡಿಯೋಗಳನ್ನುಪ್ರಾರಂಭಿಸಿ ಅದರಿಂದ ಬರುವ ಲಾಭದಲ್ಲಿ ಜೀವನನಡೆಸುತ್ತಿದ್ದರು. ಇದರ ಜೊತೆಗೆ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಶಾಲಾ- ಕಾಲೇಜುಗಳುಮುಚ್ಚಿರುವ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್‌ ಸೈಜ್‌ಫೋಟೋಗಳೂ ಸಹ ತೆಗೆಸಿಕೊಳ್ಳುವವರಿಲ್ಲದೆ ಆದಾಯಕ್ಕೆ ಹೊಡೆತ ಬಿದ್ದಿದೆ.

ಫೋಟೋಗ್ರಾಫರ್‌ ಮತ್ತು ವೀಡಿಯೋಗ್ರಾಫರ್‌ ಗಳಿಗೆ ವರ್ಷದ ಎಲ್ಲಾ ದಿನವೂ ಕೆಲಸ ಇರುವುದಿಲ್ಲ, ಕೇವಲ ಮೂರು ತಿಂಗಳು ಮಾತ್ರ ಕೆಲಸವಿರುತ್ತದೆ. ಈ ಸಂದರ್ಭದಲ್ಲಿಯೇ ಕೊರೊನಾ ಲಾಕ್‌ ಡೌನ್‌ನಿಂದಾಗಿ ಕೆಲಸವಿಲ್ಲದೆ ಅಸಹಾಯಕ ಸ್ಥಿತಿ ಎದುರಿಸುವಂತಾಗಿದೆ. ಅದರಲ್ಲೂ ಪ್ರಮುಖವಾಗಿ ಮಾರ್ಚ್‌ ತಿಂಗಳಿನಿಂದ ಜೂನ್‌ವರೆಗೆ ಮದುವೆಕಾರ್ಯಕ್ರಮ ಇದ್ದು ವರ್ಷದ ಸಂಪಾದನೆಯಲ್ಲಾ ಈ ಸಂದರ್ಭದಲ್ಲೇ ದುಡಿದುಕೊಳ್ಳಬೇಕು. ಪ್ರಮುಖ ಆದಾಯ ಬರುವ ತಿಂಗಳುಗಳಲ್ಲೇ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದೊದಗಿದೆ.

ವೃತ್ತಿಯನ್ನೇ ನಂಬಿಕೊಂಡು ತಮ್ಮ ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಬ್ಯಾಸ ಮತ್ತು ಜೀವನ ನಡೆಸುತ್ತಿದ್ದ ಛಾಯಾಗ್ರಾಹಕರ ಮತ್ತುವೀಡಿಯೋಗ್ರಾಫರ್‌ಗಳ ಕುಟುಂಬ ಇಂದುಬಹಳಷ್ಟು ಸಂಕಷ್ಟದ ಸ್ಥಿತಿ ತಲುಪಿದೆ. ಸರಕಾರವು ಇತರೆ ಕಾರ್ಮಿಕರಿಗೆ ತೋರುವ ಕಾಳಜಿಯನ್ನು ಪೋಟೋ ಮತ್ತು ವೀಡಿಯೋಗ್ರಾಫರ್‌ಗಳ ಮೇಲೂ ತೋರಬೇಕಾಗಿದೆ.

ಎನ್‌.ಆರ್‌. ಪುರ ತಾಲೂಕು ಛಾಯಾಗ್ರಾಹಕರ ಸಂಘದ ಮಾಜಿ ಉಪಾಧ್ಯಕ್ಷ ಪ್ರವೀಣ್‌ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಮೊಬೈಲ್‌ ಬಳಕೆ ಹೆಚ್ಚಾಗಿದ್ದು, ಮೊಬೈಲ್‌ನಿಂದಲೇ ಫೋಟೋ ಮತ್ತುವೀಡಿಯೋ ತೆಗೆಯುವವರೇ ಹೆಚ್ಚಾಗಿದ್ದಾರೆ. ಅಲ್ಲದೆ ಬಹುತೇಕ ಮನೆಗಳಲ್ಲಿ ಕ್ಯಾಮೆರಾ ಇರುವಕಾರಣ ಫೋಟೋಗ್ರಾಫರ್‌ ಮತ್ತು ವೀಡಿಯೋಗ್ರಾಫರ್‌ ಗಳಿಗೆ ಕೆಲಸವೇ ಇಲ್ಲದಂತಾಗಿದೆ. ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಮೊಬೈಲ್‌ನಲ್ಲೇ ಶೂಟಿಂಗ್‌ಮಾಡಿಕೊಳ್ಳುವುದರಿಂದ ವೃತ್ತಿ ಬಾಂಧವರಿಗೆ ಹೆಚ್ಚುಕೆಲಸ ದೊರೆಯುತ್ತಿಲ್ಲ ಎಂದರು.

ಎನ್‌.ಆರ್‌. ಪುರ ತಾಲೂಕು ಛಾಯಾಗ್ರಾಹಕರ ಸಂಘದ ಮಾಜಿಅಧ್ಯಕ್ಷ ಜಗದೀಶ್‌ ಮಾತನಾಡಿ, ಸರಕಾರ ಆಟೋ ಚಾಲಕರು, ಕ್ಯಾಬ್‌ ಚಾಲಕರು ಸೇರಿದಂತೆ ಇತರ ಸಂಘ- ಸಂಸ್ಥೆ ಹಾಗೂ ಕಾರ್ಮಿಕರಿಗೆ ಪ್ಯಾಕೇಜ್‌ ಘೋಷಣೆ ಮಾಡಿದಂತೆ ಸಂಕಷ್ಟದಲ್ಲಿರುವ ಛಾಯಾಗ್ರಾಹಕರು ಮತ್ತು ವೀಡಿಯೋಗ್ರಾಫರ್ ಗಳಿಗೂ ಪ್ಯಾಕೇಜ್‌ ಘೋಷಣೆ ಮಾಡುವುದರ ಜೊತೆಗೆ ಸರಕಾರಿ ಕಾರ್ಯಕ್ರಮಗಳ ವೀಡಿಯೋ ಮತ್ತು ಫೋಟೋ ತೆಗೆಯಲು ಅವಕಾಶ ಕಲ್ಪಿಸಬೇಕು ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img