Monday, June 14, 2021
Homeಸುದ್ದಿ ಜಾಲಕೊರೊನಾದಿಂದ ಚೇತರಿಸಿಕೊಂಡ 70 ರ ವೃದ್ದನಲ್ಲಿ ‘ವೈಟ್‌ ಫಂಗಸ್‌’ ಸೋಂಕು ಪತ್ತೆ

ಇದೀಗ ಬಂದ ಸುದ್ದಿ

ಕೊರೊನಾದಿಂದ ಚೇತರಿಸಿಕೊಂಡ 70 ರ ವೃದ್ದನಲ್ಲಿ ‘ವೈಟ್‌ ಫಂಗಸ್‌’ ಸೋಂಕು ಪತ್ತೆ

ಲಕ್ನೋ, ಮೇ 21: ದೇಶದಲ್ಲಿ ಕೊರೊನಾ ಸೋಂಕಿನ ಭೀತಿಯ ಮಧ್ಯೆ ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳ ಹೆಚ್ಚಳವು ಜನಸಾಮಾನ್ಯರಲ್ಲಿ ಆತಂಕ ಉಂಟು ಮಾಡಿದೆ. ಈಗಾಗಲೇ ಕೇಂದ್ರ ಸರ್ಕಾರವು ಬ್ಲ್ಯಾಕ್‌ ಫಂಗಸ್‌ ಸೋಂಕನ್ನು ಸಾಂಕ್ರಾಮಿಕ ಎಂದು ಘೋಷಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಆದರೆ ಈಗ ದೇಶದಲ್ಲಿ ವೈಟ್‌ ಫಂಗಸ್‌ ಸೋಂಕು ಕೂಡಾ ಕಾಣಿಸಿಕೊಂಡಿದೆ.

ಈಗಾಗಲೇ ಬಿಹಾರದಲ್ಲಿ ಪತ್ತೆಯಾಗಿದ್ದ ಈ ವೈಟ್‌ ಫಂಗಸ್‌ ಸೋಂಕು ಈಗ ಉತ್ತರ ಪ್ರದೇಶದ ಮಾವ್‌ ಪ್ರದೇಶದಲ್ಲಿ 70 ವರ್ಷದ ವೃದ್ದರೋರ್ವರಲ್ಲಿ ಪತ್ತೆಯಾಗಿದೆ. ಈ ವೃದ್ದ ವ್ಯಕ್ತಿಗೆ ಈ ಹಿಂದೆ ಕೊರೊನಾ ಸೋಂಕು ಬಂದಿ‌ದ್ದು ಸೋಂಕಿನಿಂದ ಗುಣಮುಖರಾಗಿದ್ದರು. ಕೊರೊನಾ ಸೋಂಕಿನಿಂದ ಗುಣಪಟ್ಟ ವ್ಯಕ್ತಿಯಲ್ಲಿ ವೈಟ್‌ ಫಂಗಸ್‌ ಸೋಂಕು ಪತ್ತೆಯಾದ ಭಾರತದ ಮೊದಲ ಪ್ರಕರಣ ಎಂದು ಹೇಳಲಾಗಿದೆ.

ವೈಟ್‌ಫಂಗಸ್‌ ಪ್ರಕರಣ

ಬಿಹಾರದಲ್ಲಿ ಒಟ್ಟು ನಾಲ್ಕು ವೈಟ್‌ ಫಂಗಸ್‌ ಪ್ರಕರಣಗಳು ದಾಖಲಾಗಿದೆ ಎಂದು ವರದಿಯಾಗಿದೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ವೃದ್ದರೊಬ್ಬರಲ್ಲಿ ಬಿಳಿ ಶಿಲೀಂಧ್ರ ದೃಢಪಟ್ಟಿದೆ. 70 ವರ್ಷದ ಈ ವೃದ್ದ ಕೊರೊನಾ ಸೋಂಕು ದೃಢಪಟ್ಟ ಕಾರಣ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ಬಳಿಕ ವೃದ್ದನ ಕಣ್ಣಿನಲ್ಲಿ ಪೊರೆಯಂತೆ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ತೆರಳಿದಾಗ ವೈಟ್‌ ಫಂಗಸ್‌ ಸೋಂಕು ಇರುವುದು ಪತ್ತೆಯಾಗಿದೆ.

ಕೊರೊನಾ ಸೋಂಕಿನ ನಡುವೆ ಬ್ಲ್ಯಾಕ್‌ ಫಂಗಸ್‌ ಪತ್ತೆಯಾದ ಹಿನ್ನೆಲೆ ಈಗಾಗಲೇ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ನಡುವೆ ವೈಟ್‌ ಫಂಗಸ್‌ ಕೂಡಾ ಪತ್ತೆಯಾಗಿರುವುದು ಇನ್ನಷ್ಟು ಭೀತಿ ಹುಟ್ಟಿಸಿದೆ. ತಜ್ಞರ ಪ್ರಕಾರ, ದುರ್ಬಲ ರೋಗನಿರೋಧಕ ಶಕ್ತಿ ಇರುವವರು, ಈ ವೈಟ್‌ ಫಂಗಸ್‌ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಅಧಿಕವಾಗಿದೆ. ಈ ಹಿನ್ನೆಲೆ ಮಧುಮೇಹ ರೋಗಿಗಳು ಹೆಚ್ಚು ಜಾಗರೂಕರಾಗಿರಬೇಕಾಗಿದೆ. ಹಾಗೆಯೇ ಕೊರೊನಾ ಸೋಂಕು ದೃಢಪಟ್ಟವರಲ್ಲೂ ವೈಟ್‌ ಫಂಗಸ್‌ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಇನ್ನು ಕ್ಯಾನ್ಸರ್‌ ರೋಗಿಗಳು, ಮಕ್ಕಳು ಹಾಗೂ ಮಹಿಳೆಯರು ಹೆಚ್ಚು ಜಾಗರೂಕರಾಗಿರಬೇಕು.

ಬ್ಲ್ಯಾಕ್‌ ಫಂಗಸ್‌ ಸಾಂಕ್ರಾಮಿಕ ಎಂದು ಘೋಷಿಸಿದ ರಾಜ್ಯಗಳು

ಕೇಂದ್ರ ಸರ್ಕಾರ ಬ್ಲ್ಯಾಕ್‌ ಫಂಗಸ್‌ ಸೋಂಕನ್ನು ಸಾಂಕ್ರಾಮಿಕ ಎಂದು ಘೋಷಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ಸೂಚನೆಯಂತೆ ಈಗಾಗಲೇ ಈಗಾಗಲೇ ತಮಿಳುನಾಡು, ಒಡಿಶಾ, ಗುಜರಾತ್‌, ಚಂಡೀಗಢ ಈ ಸೋಂಕನ್ನು ಸಾಂಕ್ರಾಮಿಕ ಎಂದು ಘೋಷಿಸಿದೆ. ಇದಕ್ಕೂ ಮುನ್ನ ರಾಜಸ್ತಾನ, ತೆಲಂಗಾಣ ಬ್ಲ್ಯಾಕ್‌ ಫಂಗಸ್‌ ಅನ್ನು ಸಾಂಕ್ರಾಮಿಕ ಎಂದು ಘೋಷಣೆ ಮಾಡಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img