Sunday, June 13, 2021
Homeಜಿಲ್ಲೆಕೊಪ್ಪಳಕೊಪ್ಪಳ : ಜಿಲ್ಲೆಗೆ 5 ಕೆ ಎಲ್ ಹೆಚ್ಚುವರಿ ಆಕ್ಸಿಜನ್ ಪೂರೈಕೆ

ಇದೀಗ ಬಂದ ಸುದ್ದಿ

ಕೊಪ್ಪಳ : ಜಿಲ್ಲೆಗೆ 5 ಕೆ ಎಲ್ ಹೆಚ್ಚುವರಿ ಆಕ್ಸಿಜನ್ ಪೂರೈಕೆ

ಕೊಪ್ಪಳ : ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಗೆ ಹೆಚ್ಚುವರಿ 5 ಕೆ ಎಲ್  ಆಕ್ಸಿಜನ್  ಪೂರೈಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ಅದೇಶಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ  ಆಕ್ಸಿಜನ್ ಅವಶ್ಯಕತೆಯ ಬಗ್ಗೆ ಶಾಸಕ ಹಾಲಪ್ಪ ಆಚಾರ್ ಅವರು ಖುದ್ದು ಸಿ ಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಹೆಚ್ಚುವರಿ  ಆಕ್ಸಿಜನ್ ಪೋರೈಸಲು ಮನವಿ ಮಾಡಿಕೊಂಡಿದ್ದರು.

ಸದ್ಯ ಈಗ ಜಿಲ್ಲೆಯಲ್ಲಿ 12 ಕೆ ಎಲ್  ಆಕ್ಸಿಜನ್ ಮಾತ್ರ ಹಂಚಿಕೆಯಗುತ್ತಿದ್ದುಅದು ಕೂಡಾ ನೆರೆಯ ಜಿಲ್ಲೆ ಗದಗ, ಬಳ್ಳಾರಿ ಹೊಸಪೇಟೆ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ.

ಸೊಂಕಿತರ ಸಂಖ್ಯೆ ಮತ್ತು ಚಿಕಿತ್ಸೆಯ ಬೆಡ್ ಗಳಿಗೆ ಅನುಗುಣವಾಗಿ  ಆಕ್ಸಿಜನ್ ಪ್ರಮಾಣ ಕೊರತೆ ಉಂಟಾಗದಂತೆ ಮನಗಂಡ . ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ಕಾಳಜಿವಹಿಸಿ ಹೆಚ್ಚುವರಿ 5 ಕೆ ಎಲ್  ಆಕ್ಸಿಜನ್ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ : ಈರಯ್ಯ ಕುರ್ತಕೋಟಿ

ವಿ ನ್ಯೂಸ್ 24

ಕೊಪ್ಪಳ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img