Monday, June 14, 2021
Homeಸುದ್ದಿ ಜಾಲಸ್ಯಾನಿಟೈಸರ್‌ನಿಂದ ಮದ್ಯ ತಯಾರಿಸುತ್ತಿದ್ದ 6 ಮಂದಿ ಆರೋಪಿಗಳ ಬಂಧನ

ಇದೀಗ ಬಂದ ಸುದ್ದಿ

ಸ್ಯಾನಿಟೈಸರ್‌ನಿಂದ ಮದ್ಯ ತಯಾರಿಸುತ್ತಿದ್ದ 6 ಮಂದಿ ಆರೋಪಿಗಳ ಬಂಧನ

 ಚೆನ್ನೈ, ಮೇ 20: ತಮಿಳುನಾಡಿನ ಕುಡ್ಡಲೋರ್ ಜಿಲ್ಲೆಯಲ್ಲಿ ಸ್ಯಾನಿಟೈಸರ್‌ನಿಂದ ಮದ್ಯವನ್ನು ತಯಾರಿಸುತ್ತಿದ್ದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಡ್ಡಲೋರ್ ಜಿಲ್ಲೆಯ ರಾಮನಾಥನ್ ಕುಪ್ಪಂ ಎಂಬಲ್ಲಿ ಬುಧವಾರ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಆರು ಮಂದಿ ಸ್ಯಾನಿಟೈಸರ್‌ಅನ್ನು ಬಳಸಿ ಅಕ್ರಮವಾಗಿ ಮದ್ಯವನ್ನು ತಯಾರಿಸುತ್ತಿದ್ದರು. ತಪಾಸಣೆಯನ್ನು ನಡೆಸಿದ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳು ಮದ್ಯ ತಯಾರಿಸಲು ಬಳಸುತ್ತಿದ್ದ ವಸ್ತು ಸ್ಯಾನಿಟೈಸರ್ ಎಂಬುದನ್ನು ಖಚಿತಪಡಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಸ್ಥಳದಲ್ಲಿ ದೊರೆತ 300 ಲೀಟರ್ ಸ್ಯಾನಿಟೈಸರ್, ಖಾಲಿ ಬಾಟಲ್‌ಗಳು ಹಾಗೂ ಒಂದು ಟಾಟಾ ಏಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ತಮಿಳುನಾಡಿನಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದ್ದು ಲಿಕ್ಕರ್ ಸ್ಟೋರ್‌ಗಳು ಕೂಡ ಮುಚ್ಚಿದೆ. ಮೇ 24ರ ವರೆಗೂ ತಮಿಳುನಾಡಿನಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಬುಧವಾರ ತಮಿಳುನಾಡಿನಲ್ಲಿ 34,875 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಕೊರೊನಾ ವೈರಸ್‌ನ ಒಟ್ಟು ಪ್ರಕರಣಗಳ ಸಂಖ್ಯೆ 16,99,225ಕ್ಕೆ ಏರಿಕೆಯಾಗಿದೆ. ಸದ್ಯ 2.5 ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿತರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಬುಧವಾರ 365 ಜನರು ತಮಿಳುನಾಡಿನಲ್ಲಿ ಕೊರೊನಾ ವೈರಸ್‌ಗೆ ಪ್ರಾಣ ಕಳೆದುಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img