Monday, June 14, 2021
Homeಸುದ್ದಿ ಜಾಲಬೆಂಗಳೂರಿಗೆ 5ನೇ ಬಾರಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಆಗಮನ

ಇದೀಗ ಬಂದ ಸುದ್ದಿ

ಬೆಂಗಳೂರಿಗೆ 5ನೇ ಬಾರಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಆಗಮನ

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಲ್ಲಿ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಕೇಂದ್ರ ಸರ್ಕಾರ 5ನೇ ಬಾರಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲನ್ನು ಕರ್ನಾಟಕಕ್ಕೆ ಕಳುಹಿಸಿದ್ದು, 180 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಬೆಂಗಳೂರಿಗೆ ರವಾನಿಸಿದೆ.

ಇಂದು ಮುಂಜಾನೆ 1.05ಕ್ಕೆ ರಾಜ್ಯಕ್ಕೆ 180 ಮೆಟ್ರಿಕ್ ಟನ್ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಜಾರ್ಖಂಡ್ ನ ಟಾಟಾ ನಗರದಿಂದ ಬೆಂಗಳೂರಿಗೆ ಬಂದು ತಲುಪಿದೆ. ಒಟ್ಟು 8 ಕಂಟೇನರ್ ಗಳಲ್ಲಿ ಸುಮಾರು 180 ಮೆಟ್ರಿಕ್ ಟನ್ ನಷ್ಟು ತೂಕದ ಆಮ್ಲಜನಕ ಹೊತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ಆಗಮಿಸಿದೆ. ಈ ಹಿಂದೆ ಅಂದರೆ ಮೇ 11ರಂದು ಮತ್ತು ಮೇ 15ರಂದು ಇದೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಟಾಟಾನಗರ ಮತ್ತು ಕಳಿಂಗ ನಗರದಿಂದ ಒಟ್ಟು 240 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಬೆಂಗಳೂರಿಗೆ ತಲುಪಿತ್ತು.

ಇದೀಗ ಸುಮಾರು 180 ಟನ್ ತೂಕದ ಆಕ್ಸಿಜನ್ ಹೊತ್ತ ರೈಲು ವೈಟ್ ಫೀಲ್ಡ್ ನಿಲ್ಜಾಣಕ್ಕೆ ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img