Sunday, June 13, 2021
Homeಸುದ್ದಿ ಜಾಲಈ ವರ್ಷದ ಡಿಸೆಂಬರ್ ವೇಳೆಗೆ ದೇಶದ ಎಲ್ಲಾ ಜನರಿಗೂ ಕೊರೋನಾ ಲಸಿಕೆ ಲಭ್ಯ : ಜೆ.ಪಿ....

ಇದೀಗ ಬಂದ ಸುದ್ದಿ

ಈ ವರ್ಷದ ಡಿಸೆಂಬರ್ ವೇಳೆಗೆ ದೇಶದ ಎಲ್ಲಾ ಜನರಿಗೂ ಕೊರೋನಾ ಲಸಿಕೆ ಲಭ್ಯ : ಜೆ.ಪಿ. ನಡ್ಡಾ

 ಜೈಪುರ : ದೇಶದಲ್ಲಿ ಸದ್ಯ ಕೊರೋನಾ ಲಸಿಕೆ ಕೊರತೆ ಕಾಣುತ್ತಿದೆ. ಇದರ ಮಧ್ಯೆ ಈ ವರ್ಷದ ಡಿಸೆಂಬರ್ ವೇಳೆಗೆ ದೇಶದ ಎಲ್ಲ ಜನರಿಗೂ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ತಿಳಿಸಿದ್ದಾರೆ.

ರಾಜಸ್ಥಾನದ ಕೋವಿಡ್​ ಪರಿಸ್ಥಿತಿ ಪರಿಶೀಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹಾಗೂ ಪಕ್ಷದ ಸಂಸದರೊಂದಿಗೆ ವರ್ಚುವಲ್​ ಸಭೆ ನಡೆಸಿ ಬಳಿಕ ಮಾತನಾಡಿದ ನಡ್ಡಾ, ‘ಭಾರತವು ಕೇವಲ 9 ತಿಂಗಳಲ್ಲಿ ಮೊದಲ ಬಾರಿಗೆ ಎರಡು ದೇಶೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. ಇದುವರೆಗೆ 18 ಕೋಟಿ ಭಾರತೀಯರಿಗೆ ವ್ಯಾಕ್ಸಿನ್​ ನೀಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ’ ಎಂದು ಹೇಳಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಆಮ್ಲಜನಕ ಮತ್ತು ಔಷಧಿಗಳ ಲಭ್ಯತೆ ಮತ್ತು ಪೂರೈಕೆಯನ್ನು ಖಚಿತಪಡಿಸಿದೆ ಎಂದು ನಡ್ಡಾ ಆರೋಪಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img