Monday, June 14, 2021
Homeಸುದ್ದಿ ಜಾಲಗಾಯಕ ಅರ್ಜಿತ್ ಸಿಂಗ್ ತಾಯಿ ಕಿಲ್ಲರ್ ಕೊರೊನಾಗೆ ಬಲಿ

ಇದೀಗ ಬಂದ ಸುದ್ದಿ

ಗಾಯಕ ಅರ್ಜಿತ್ ಸಿಂಗ್ ತಾಯಿ ಕಿಲ್ಲರ್ ಕೊರೊನಾಗೆ ಬಲಿ

ಕೋಲ್ಕತ: ಕರೊನಾ ಸೋಂಕು ದೇಶಾದ್ಯಂತ ಶರವೇಗದಲ್ಲಿ ಹಬ್ಬುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮತ್ತು ಅವರ ಸಂಬಂಧಿಕರೂ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಇದೀಗ ಗಾಯಕ ಅರ್ಜಿತ್​ ಸಿಂಗ್​ ಅವರ ತಾಯಿ ಕೂಡ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಅರ್ಜಿತ್ ಅವರ ತಾಯಿಗೆ ಕೆಲ ದಿನಗಳ ಹಿಂದೆ ಸೋಂಕು ದೃಢವಾಗಿದ್ದು, ಅವರನ್ನು ಕೋಲ್ಕತ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತೂವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಅಸು ನೀಗಿದ್ದಾರೆ.

ಗಾಯಕನ ತಾಯಿ ಆಸ್ಪತ್ರೆಗೆ ಸೇರಿರುವ ವಿಚಾರವನ್ನು ಮೊದಲು ನಟಿ ಸ್ವಸ್ತಿಕಾ ಮುಖರ್ಜಿ ಸಾಮಾಜಿಕವಾಗಿ ತಿಳಿಸಿದ್ದರು. ಆಸ್ಪತ್ರೆಯಲ್ಲಿದ್ದ ಅವರಿಗೆ ಎ ನೆಗೆಟಿವ್​ ರಕ್ತದ ಅವಶ್ಯಕತೆ ಇದೆ, ಯಾರಾದರೂ ಮುಂದೆ ಬಂದು ರಕ್ತದಾನ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೋರಿಕೊಂಡಿದ್ದರು. ಅದಾದ ನಂತರ ಆ ಟ್ವೀಟ್​ನ್ನು ತೆಗೆದುಹಾಕಿದ್ದರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img