Tuesday, June 15, 2021
Homeಸುದ್ದಿ ಜಾಲಗುಜರಾತ್ ನಲ್ಲಿ `ತೌಕ್ತೆ' ಚಂಡಮಾರುತ ಅಬ್ಬರಕ್ಕೆ 13 ಮಂದಿ ಸಾವು

ಇದೀಗ ಬಂದ ಸುದ್ದಿ

ಗುಜರಾತ್ ನಲ್ಲಿ `ತೌಕ್ತೆ’ ಚಂಡಮಾರುತ ಅಬ್ಬರಕ್ಕೆ 13 ಮಂದಿ ಸಾವು

 ನವದೆಹಲಿ: ಗುಜರಾತ್ ನಲ್ಲಿ ತೌಕ್ತೆ ಚಂಡಮಾರುತ ಅಬ್ಬರಕ್ಕೆ ಭಾರೀ ಮಳೆ-ಗಾಳಿಗೆ 13 ಜನರು ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.

ಸೋಮವಾರ ರಾತ್ರಿ 8.30 ರ ಸುಮಾರಿಗೆ ತೌಕ್ತೆ ಚಂಡಮಾರುತವು ಗುಜರಾತ್ ಪ್ರವೇಶ ಮಾಡಿದೆ. ಮತ್ತು ಇದು ದಶಕಗಳಲ್ಲಿ ಗುಜರಾತ್ ಗೆ ಅಪ್ಪಳಿಸಿದ ಅತಿದೊಡ್ಡ ಚಂಡಮಾರುತವಾಗಿದ್ದು, ಗಂಟೆಗೆ 155-165 ಕಿಲೋಮೀಟರ್ ವೇಗದಲ್ಲಿ ಬೀಸುತ್ತದೆ.

ಗುಜರಾತ್ ನಲ್ಲಿ ಚಂಡಮಾರುತದ ಪ್ರಭಾವದಿಂದ ಸಂಭವಿಸಿದ ಅಪಘಾತಗಳಿಂದ ಕನಿಷ್ಠ 13 ಜನರು ಮೃತಪಟ್ಟಿದ್ದು, 16 ಸಾವಿರಕ್ಕೂ ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಮತ್ತು 40 ಸಾವಿರಕ್ಕೂ ಹೆಚ್ಚು ಮರಗಳು ಮತ್ತು 1 ಸಾವಿರಕ್ಕೂ ಹೆಚ್ಚು ವಿದ್ಯೂತ್ ಕಂಬಗಳು ಚಂಡಮಾರುತದಲ್ಲಿ ನೆಲಕ್ಕುರುಳಿವೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img