Monday, June 14, 2021
Homeಸುದ್ದಿ ಜಾಲಬಳ್ಳಾರಿಯಲ್ಲಿ ಇಂದಿನಿಂದ 5 ದಿನ ಸಂಪೂರ್ಣ ಲಾಕ್​ಡೌನ್

ಇದೀಗ ಬಂದ ಸುದ್ದಿ

ಬಳ್ಳಾರಿಯಲ್ಲಿ ಇಂದಿನಿಂದ 5 ದಿನ ಸಂಪೂರ್ಣ ಲಾಕ್​ಡೌನ್

ಬಳ್ಳಾರಿ (ಮೇ 19): ಕೊರೋನಾ ಎರಡನೇ ಅಲೆ ಅತ್ಯಂತ ವೇಗವಾಗಿ‌ ಹರಡುತ್ತಿರುವ ಹಿನ್ನೆಲೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳನ್ನ ಇಂದಿನಿಂದ ಐದು ದಿನಗಳ‌ ಕಾಲ‌ ಸಂಪೂರ್ಣವಾಗಿ ಲಾಕ್​ಡೌನ್ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಪವನ್​ ಕುಮಾರ್ ಮಾಲಪಾಟಿ ತಿಳಿಸಿದ್ದಾರೆ. ಕೊರೋನಾ ದಿನದಿಂದ ದಿನಕ್ಕೆ ತನ್ನ ಕದಂಬ ಬಾಹುವನ್ನ ಅತೀ ವೇಗವಾಗಿ ಚಾಚುತ್ತಿದೆ ಮತ್ತು ತನ್ನ ರೌದ್ರ ನರ್ತನದಿಂದ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಹೀಗಾಗಿ ಈ ಚೈನ್ ಲಿಂಕ್ ಅನ್ನು ಹೇಗಾದರೂ ಮಾಡಿ ಕಟ್ಟಿ ಹಾಕಲೇ ಬೇಕಾದ ಅನಿವಾರ್ಯ ಇರುವುದರಿಂದ ಜಿಲ್ಲಾಧಿಕಾರಿಗಳು ಸಂಪೂರ್ಣ ಲಾಕ್ ಡೌನ್‌ ಘೋಷಣೆ ಮಾಡಿದ್ದಾರೆ.

ಬಳ್ಳಾರಿ ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಿನ್ನೆ ನಡೆದ ಪ್ರಧಾನಿ ಮೋದಿ ಅವರೊಂದಿಗಿನ ವಿಡಿಯೊ‌ ಕಾನ್ಫರೆನ್ಸಿನಲ್ಲಿ ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇಂದು ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿ ಸೇರಿದಂತೆ ಇನ್ನಿತರೆ ಸಾಮಾನು ಸರಂಜಾಮು ಖರೀದಿಗೆ ಅವಕಾಶ ನೀಡಲಾಗಿದ್ದು, ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿರುತ್ತೆ. ಅನಗತ್ಯವಾಗಿ ಓಡಾಡುವವರಿಗೆ ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಈ ಮುಂಚೆ ರಾಜ್ಯ ಸರ್ಕಾರ ಘೋಷಿಸಿದ ಹಾಗೆ ಲಾಕ್ ಡೌನ್ ನಿಯಮಾವಳಿಗಳು ಈ ಲಾಕ್ ಡೌನ್‌ನಲ್ಲಿ ಇರುವುದಿಲ್ಲ, ಈ ನಿಯಮಾವಳು ಕೊಂಚ ಮಟ್ಟಿಗೆ ಬದಲಾಗುತ್ತವೆ. ಬೆಳಿಗ್ಗೆ ಹತ್ತು ಗಂಟೆಗಳ ವರಗೆ ಅಗತ್ಯ ವಸ್ತುಗಳ ಖರೀದಿಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಆದರೆ ನಾಳೆ ಯಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೂ ಅವಕಾಶ ಇರುವುದಿಲ್ಲ. ಮೆಡಿಕಲ್ ಎಮರ್ಜೆನ್ಸಿ ಹೊರತು ಪಡಿಸಿ ಉಳಿದೆಲ್ಲವು ಸಂಪೂರ್ಣ ಬಂದ್ ಆಗಿರುತ್ತವೆ. ನಾಳೆ ಬೆಳಿಗ್ಗೆ ಹತ್ತು ಗಂಟೆಯಿಂದ ಎಲ್ಲವೂ ಬಂದ್.

ಅಂತಾರಾಜ್ಯ ಹಾಗೂ ಅಂತರ್ ಜಿಲ್ಲೆಗಳಲ್ಲಿ ಸರಕು ಸಾಗಣೆ ವಾಹನ ಸೇರಿದಂತೆ ವೈದ್ಯಕೀಯ ಸೇವೆಗಳಿಗೆ ಮಾತ್ರ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಹಾಲು ಮತ್ತು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದು ಕೂಡ ತಳ್ಳುವ ಗಾಡಿ ಅಥವಾ ಹಾಪ್ ಕಾಮ್ಸ್ ಸೇವೆಯಿಂದ ತರಕಾರಿಗಳ ಪೂರೈಕೆಗೆ ನಿರ್ಧರಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ದೊಡ್ಡ ಮಾರುಕಟ್ಟೆ ಯಾದ ಎಪಿಎಮ್‌ಸಿ ಓಪನ್ ಇರುತ್ತೆ, ಆದರೆ ಮಾರುಕಟ್ಟೆ ಯಲ್ಲಿ ಜನರಿಗೆ ಅವಕಾಶ ಇರುವುದಿಲ್ಲ. ಕೇವಲ ತರಕಾರಿ ಹಣ್ಣು ಇತರೆ ರೈತ ಬೆಳೆದ ದವಸ ಧಾನ್ಯಗಳ ಮಾರಾಟಕ್ಕೆ ಮಾತ್ರ ಅವಕಾಶ. ಮತ್ತು ಮುಖ್ಯವಾಗಿ ಎಪಿಎಮ್‌ಸಿ ಮಾರುಕಟ್ಟೆ ಯಲ್ಲಿ ತರಕಾರಿ ಖರೀದಿ ಮಾಡಿದ ನಂತರ ತಳ್ಳುವ ಗಾಡಿಯಲ್ಲಿ ಮಾರಲು ಅವಕಾಶ ಮತ್ತು ಹಾಪ್ ಕಾಮ್ಸ್ ಮೂಲಕ ಮಾತ್ರ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಗಳು ತಿಳಿಸಿದ್ದಾರೆ.

ಎಸ್​ಪಿ ಸೈದಲು ಅಡಾವತ್ ಮಾತನಾಡಿ, ಗಡಿಭಾಗದಲ್ಲಿ ಸಂಪೂರ್ಣವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಲಾಕ್​ಡೌನ್ ಸಮಯದಲ್ಲಿ ಅನಗತ್ಯವಾಗಿ ಹೊರಬಂದ್ರೆ ಮಾತ್ರ ವಾಹನ ಸೀಜ್ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ. ಯಾವುದೇ ಮೂಲಾಜಿಲ್ಲದೆ ಪೈನ್ ಹಾಕಲಾಗುತ್ತೆ. ನಾವು ಹೇಗಾದ್ರು ಮಾಡಿ ಈ ಮಹಾ ಮಾರಿಯ ಚೈನ್ ಲಿಂಕ್ ಅನ್ನು ಕಟ್ ಮಾಡಲೇ ಬೇಕಿದೆ. ಇದಕ್ಕೆ ಜನರ ಸಹಕಾರ ಅತೀ ಮುಖ್ಯವಾಗುತ್ತೆ ಎಂದರು.
ಒಟ್ಟಾರೆಯಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಪತ್ತೆ ದಿನ ದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ‌ ಉದಾಹರಣೆಗೆ 10 ಜನರಿಗೆ ಕೊರೊನ ಟೆಸ್ಟ್ ಮಾಡಿದ್ರೆ ಸುಮಾರು ಆರು ಜನಕ್ಕೆ ಕೊರೋನ ಸೋಂಕು ದೃಢವಾಗುತ್ತಿದೆ ಹಾಗಾಗಿ ಅವಳಿ ಜಿಲ್ಲೆಯಲ್ಲಿ ಕಠಿಣವಾದ ಲಾಕ್ ಡೌನ್ ಜಾರಿ ಮಾಡಲಾಗಿದೆ. ಹೀಗಾಗಿ ಗಣಿನಾಡಿನ ಜನ ಇದಕ್ಕೆ ಸಹ ಕರಿಸಿ ಬೇಕು ಜನ್ರು ತಮ್ಮ ಜೀವದ ಮೇಲೆ ತಾವೆ ಹೊಣೆ ಎನ್ನುವ ಇರಬೇಕಾಗುತ್ತೆ. ಎಲ್ಲರೂ ತಪ್ಪದೇ ಮಾಸ್ಕ್ ಸಾಮಾಜಿಕ ಅಂತರ ಸ್ಯಾನಿಟೈಸ್ ಬಳಕೆ ಮಾಡಬೇಕು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img