Monday, June 14, 2021
Homeಕೋವಿಡ್-19ಭಾರತದಲ್ಲಿ ಕೊರೊನಾ ಎರಡನೇ ಅಲೆಗೆ 270 ವೈದ್ಯರು ಬಲಿ!

ಇದೀಗ ಬಂದ ಸುದ್ದಿ

ಭಾರತದಲ್ಲಿ ಕೊರೊನಾ ಎರಡನೇ ಅಲೆಗೆ 270 ವೈದ್ಯರು ಬಲಿ!

 ನವದೆಹಲಿ : ಕೊರೊನಾ ಎರಡನೇ ಅಲೆಯಲ್ಲಿ ದೇಶಾದ್ಯಂತ ಈವರೆಗೆ 270 ವೈದ್ಯರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್ ಮೊದಲ ಅಲೆಯಲ್ಲಿ 748 ವೈದ್ಯರು ಕೊರೊನಾ ವೈರಸ್ ಗೆ ಬಲಿಯಾಗಿದ್ದರೆ, ಕೋವಿಡ್-19 ರ ಎರಡನೇ ಅಲೆಯಲ್ಲಿ, ದೇಶಾದ್ಯಂತ 270 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹೇಳಿದೆ.

ಐಎಂಎ ಬಹಿರಂಗಪಡಿಸಿದ ರಾಜ್ಯವಾರು ದತ್ತಾಂಶವು ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ವೈದ್ಯರಲ್ಲಿ ಅತಿ ಹೆಚ್ಚು ಸಾವು ಸಂಭವಿಸಿರೋದಾಗಿ ತಿಳಿಸಿದೆ. ಬಿಹಾರದಲ್ಲಿ 78 ವೈದ್ಯರು ಮೃತಪಟ್ಟಿದ್ದರೆ, ಉತ್ತರ ಪ್ರದೇಶದಲ್ಲಿ ಎರಡನೇ ಅಲೆಯಲ್ಲಿ 37 ವೈದ್ಯರು ಮೃತಪಟ್ಟಿದ್ದಾರೆ. ಎರಡನೇ ಅಲೆಯಿಂದ ತೀವ್ರವಾಗಿ ಬಾಧಿತವಾದ ದೆಹಲಿಯಲ್ಲಿ ಕೋವಿಡ್-19 ನಿಂದಾಗಿ 28 ವೈದ್ಯರು ಸತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img