Sunday, June 13, 2021
Homeಸುದ್ದಿ ಜಾಲರಾಜ್ಯದಲ್ಲಿ ಇಂದು 30,309 ಕೊರೊನಾ ಪ್ರಕರಣಗಳು ಪತ್ತೆ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಇಂದು 30,309 ಕೊರೊನಾ ಪ್ರಕರಣಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು 58,395 ಜನ ಗುಣಮುಖರಾಗಿದ್ದು ಈವರೆಗೂ ಒಂದೇ ದಿನದಲ್ಲಿ ಚೇತರಿಕೆಗೊಂಡ ಅತೀ ಹೆಚ್ಚು ಸಂಖ್ಯೆಯಾಗಿದೆ. ರಾಜ್ಯದಲ್ಲಿ ಇಂದು 30,309 ಪ್ರಕರಣಗಳು ಪತ್ತೆಯಾಗಿದ್ದು, ಗುಣಮುಖ ಹೊಂದಿದವರ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಸಿದೆ. ಬೆಂಗಳೂರಿನಲ್ಲಿ 8,676 ಪ್ರಕರಣಗಳು ಪತ್ತೆಯಾಗಿದ್ದು, 31,795 ಜನ ಗುಣಮುಖ ಹೊಂದಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಈ ಮೂಲಕ ಕರ್ನಾಟಕದಲ್ಲಿ ಇಂದು ಕೊವಿಡ್​ನಿಂದ ಗುಣಮುಖ ಹೊಂದಿದವರ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಸಿದಂತಾಗಿದೆ.

ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 525 ಜನರ ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ 298 ಜನರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊವಿಡ್ ಸೋಂಕಿನ ಸಂಖ್ಯೆ ಇಳಿಮುಖವಾಗುತ್ತಿದೆ. ಕರ್ನಾಟಕದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಣೆಯಾದ ನಂತರ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಇತರ ಜಿಲ್ಲೆಗಳ ಜನರು ತಮ್ಮ ಸ್ವಂತ ಊರಿಗೆ ತೆರಳಿದ ಕಾರಣ ಬೆಂಗಳೂರಿನಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಹೇಳಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು?
ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 8,676 ಜನರಿಗೆ ಸೋಂಕು ದೃಢಪಟ್ಟಿದೆ. ಬಾಗಲಕೋಟೆ 295, ಬಳ್ಳಾರಿ 1,799, ಬೆಳಗಾವಿ 2,118, ಬೆಂಗಳೂರು ಗ್ರಾಮಾಂತರ 133, ಬೆಂಗಳೂರು ನಗರ 867, ಬೀದರ್ 113, ಚಾಮರಾಜನಗರ 345, ಚಿಕ್ಕಬಳ್ಳಾಪುರ 339, ಚಿಕ್ಕಮಗಳೂರು 401, ಚಿತ್ರದುರ್ಗ 43, ದಕ್ಷಿಣ ಕನ್ನಡ 777, ದಾವಣಗೆರೆ 594, ಧಾರವಾಡ 969, ಗದಗ 543, ಹಾಸನ 834, ಹಾವೇರಿ 187, ಕಲಬುರಗಿ 548, ಕೊಡಗು 161, ಕೋಲಾರ 1021, ಕೊಪ್ಪಳ 523, ಮಂಡ್ಯ 606, ಮೈಸೂರು 1,916, ರಾಯಚೂರು 493, ರಾಮನಗರ 427, ಶಿವಮೊಗ್ಗ116, ತುಮಕೂರು 1562, ಉಡುಪಿ 737, ಉತ್ತರ ಕನ್ನಡ 803, ವಿಜಯಪುರ 262, ಯಾದಗಿರಿ 317 ಸೋಂಕಿತರು ದೃಢಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img