Monday, June 14, 2021
Homeಸುದ್ದಿ ಜಾಲಭಾರತೀಯ ವನಿತಾ ಕ್ರಿಕೆಟ್ ಆಟಗಾರ್ತಿ ಪ್ರಿಯಾ ಪೂನಿಯಾ ತಾಯಿ ಕೊರೊನಾಗೆ ಬಲಿ!

ಇದೀಗ ಬಂದ ಸುದ್ದಿ

ಭಾರತೀಯ ವನಿತಾ ಕ್ರಿಕೆಟ್ ಆಟಗಾರ್ತಿ ಪ್ರಿಯಾ ಪೂನಿಯಾ ತಾಯಿ ಕೊರೊನಾಗೆ ಬಲಿ!

ಜೈಪುರ: ಭಾರತೀಯ ವನಿತಾ ಕ್ರಿಕೆಟ್ ತಂಡದ ಆಟಗಾರ್ತಿ ಪ್ರಿಯಾ ಪೂನಿಯಾ ಅವರ ತಾಯಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ.

24 ವರ್ಷದ ಮಹಿಳಾ ಆಟಗಾರ್ತಿ ಪ್ರಿಯಾ ಈ ಬಗ್ಗೆ ತನ್ನಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ಎಂದಿಗೂ ನಾನು ಬಲಿಷ್ಠವಾಗಿ ಇರಬೇಕು ಎಂದು ನೀನು ಯಾವತ್ತೂ ಯಾಕೆ ಹೇಳುತ್ತಿದ್ದೆ ಎಂದು ಇವತ್ತು ತಿಳಿಯಿತು. ಬಹುಶಃ ನಿನ್ನನ್ನು ಅಗಲಿ ಇರಬೇಕಾದ ಪರಿಸ್ಥಿತಿಗೆ ನಾನು ಕಠಿಣವಾಗಿರಬೇಕು ಎಂದು ನಿನಗೆ ಗೊತ್ತಿತ್ತು. ನೀನು ಎಷ್ಟೇ ದೂರವಿದ್ದರೂ ನಾನು ಎಂದಿಗೂ ನಿನ್ನನ್ನು ಪ್ರೀತಿಸುತ್ತೇನೆ” ಎಂದು ಪ್ರಿಯಾ ಪೂನಿಯಾ ಬರೆದುಕೊಂಡಿದ್ದಾರೆ.

ಮಹಿಳಾ ತಂಡದ ಮತ್ತೋರ್ವ ಆಟಗಾರ್ತಿ ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ಕೋವಿಡ್ ಸೋಂಕಿನಿಂದ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡಿದ್ದಾರೆ. ಮಾಜಿ ಆಟಗಾರ ಆರ್.ಪಿ.ಸಿಂಗ್ ಮತ್ತು ಪಿಯೂಷ್ ಚಾವ್ಲಾ ಅವರು ಸೋಂಕಿನಿಂದ ತಂದೆಯನ್ನು ಕಳೆದುಕೊಂಡಿದ್ದರು.

ವನಿತಾ ಕ್ರಿಕೆಟ್ ತಂಡ ಮೇ. 19ರಿಂದ ಮುಂಬೈನಲ್ಲಿ ಕ್ವಾರಂಟೈನ್ ಗೆ ಒಳಗಾಗಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಪುರುಷರ ತಂಡದ ಜೊತೆ ಪ್ರಯಾಣ ಬೆಳೆಸಲಿದೆ.

ಇಂಗ್ಲೆಂಡ್ ವಿರುದ್ಧ ವನಿತಾ ತಂಡ ಒಂದು ಟೆಸ್ಟ್, ಮೂರು ಟಿ 20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ತಂಡಕ್ಕೆ ನೂತನ ಕೋಚ್ ಆಗಿ ರಮೇಶ್ ಪವಾರ್ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಶಿವಸುಂದರ್ ದಾಸ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img