Monday, June 14, 2021
Homeಸುದ್ದಿ ಜಾಲಗೋಮೂತ್ರದ ಸಾರ ಶ್ವಾಸಕೋಶದ ಸೋಂಕು,ಕೊರೋನಾ ವಿರುದ್ಧ ರಕ್ಷಣೆ ನೀಡಬಲ್ಲದು: ಪ್ರಜ್ಞಾ ಠಾಕೂರ್

ಇದೀಗ ಬಂದ ಸುದ್ದಿ

ಗೋಮೂತ್ರದ ಸಾರ ಶ್ವಾಸಕೋಶದ ಸೋಂಕು,ಕೊರೋನಾ ವಿರುದ್ಧ ರಕ್ಷಣೆ ನೀಡಬಲ್ಲದು: ಪ್ರಜ್ಞಾ ಠಾಕೂರ್

ಭೋಪಾಲ್: ಗೋಮೂತ್ರದ ಸಾರ ಶ್ವಾಸಕೋಶದ ಸೋಂಕು ಮತ್ತು ಕೊರೋನಾವೈರಸ್ ವಿರುದ್ಧ ರಕ್ಷಣೆ ನೀಡಬಲ್ಲದು ಎಂದು ಭೋಪಾಲ್ ಬಿಜೆಪಿ ಸಂಸದ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ. “ದೇಸಿ ಹಸುವಿನ ಗೋ ಮೂತ್ರದ ಸಾರ ನಮ್ಮನ್ನು ಶ್ವಾಸಕೋಶದ ಸೋಂಕಿನಿಂದ ದೂರವಿರಿಸುತ್ತದೆ. ನಾನು ಪ್ರತಿದಿನ ಗೋಮೂತ್ರ ಸೇವನೆ ಮಾಡುವುದರಿಂದ ಕೊರೋನಾ ಆಗಲಿ ಬೇರಾವುದೇ ರೋಗದಿಂದಾಗಲೀ ಬಾಧಿತವಾಗಿಲ್ಲ.”

“ಗೋಮೂತ್ರ ಆರ್ಕ್” ಎಂಬ ಔಷಧಿಯನ್ನು ನಾನು ಬಳಸುತ್ತಿರುವುದರಿಂದ ದೇವರು ನನ್ನನ್ನು ರಕ್ಷಿಸುತ್ತಾನೆ ಎಂದು ನಾನು ನಂಬುತ್ತೇನೆ “ಎಂದು ಭೋಪಾಲ್ ಸಂಸದೆ ಭಾನುವಾರ ಸಂಜೆ ಭೋಪಾಲ್‌ನ ಬೈರಾಘರ್ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.

ಹಸುವಿನ ಮೂತ್ರವು “ಜೀವ ರಕ್ಷಕ ಔಷಧವಾಗಿದೆ. ಎಂದು ಅವರು ಹೇಳಿದರು.

ಇದಕ್ಕೆ ಮುನ್ನ ಕಾಂಗ್ರೆಸ್ ನಾಯಕರು ಭೋಪಾಲ್ ಸಂಸದೆಯನ್ನು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಗುರುತಿಸಿದವರಿಗೆ 10,000 ರೂ ಬಹುಮಾನವನ್ನು ಘೋಷಿಸಿದ್ದರು, ಜನರಿಗೆ ನಿಜವಾದ ಸಹಾಯ ಅಗತ್ಯವಿದ್ದಾಗ ಅವರು ಕಾಣೆಯಾಗುತ್ತಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ತಾವು ಪ್ರಚಾರವಿಲ್ಲದೆ ಜನರಿಗೆ ನೆರವಾಗುತ್ತಿದ್ದೇವೆಂದು ಎಂದು ಸಂಸದೆ ಠಾಕೂರ್ ಹೇಳಿದ್ದಾರೆ.

2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಠಾಕೂರ್ ಅವರ ವಿವಿಧ ಹೇಳಿಕೆಗಳು ಈ ಹಿಂದೆ ವಿವಾದಗಳಿಗೆ ನಾಂದಿ ಹಾಡಿದವು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img