Monday, June 14, 2021
Homeಜಿಲ್ಲೆಕೋಲಾರಆದಾಯ ಮೀರಿ ಆಸ್ತಿಗಳಿಕೆ ಆರೋಪ ಹೊತ್ತಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಮಾನತು

ಇದೀಗ ಬಂದ ಸುದ್ದಿ

ಆದಾಯ ಮೀರಿ ಆಸ್ತಿಗಳಿಕೆ ಆರೋಪ ಹೊತ್ತಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಮಾನತು

ಕೋಲಾರ : ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್, ಅಮಾನತ್ತುಗೊಂಡಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪ ಹೊತ್ತಿದ್ದ ವಿಜಯ ಕುಮಾರ್ ಜ 2 ರಂದು ಎಸಿಬಿ ಅಧಿಕಾರಿಗಳ ದಾಳಿಗೆ ಒಳಗಾಗಿದ್ದರು. ಅಂದು ಎ ಸಿ ಬಿ ಅಧಿಕಾರಿಗಳು ಡಾ.ವಿಜಯಕುಮಾರ್ ರವರ ಮನೆ, ಕಚೇರಿ ಮೇಲೆ ಕಾರ್ಯಾಚರಣೆ ನಡೆಸಿ
ಆದಾಯಕ್ಕಿಂತ ಶೇ 343 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವ ಆಪಾದನೆಗೆ ಒಳಗಾಗಿದ್ದರು.

ಈ ಹಿನ್ನೆಲೆಯಲ್ಲಿ ಅದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಮೇಲೆ ಸರ್ಕಾರವು ಇಂದು ಅಮಾನತು ಅದೇಶ ಹೊರಡಿಸಿದೆ.

ಇವರು ಕೋಲಾರದಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದು ಇವರ ಕಾರ್ಯವೈಖರಿ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆಗಳನ್ನೂ ನಡೆಸಿದ್ದವು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img