Tuesday, June 15, 2021
Homeಸುದ್ದಿ ಜಾಲಕೊರೊನಾ ಸೋಂಕಿತ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮ.!

ಇದೀಗ ಬಂದ ಸುದ್ದಿ

ಕೊರೊನಾ ಸೋಂಕಿತ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮ.!

ಚಿಕ್ಕಮಗಳೂರು: ಕೊರೊನಾ ಸೋಂಕು ತಗುಲಿದ್ದ ಅಣ್ಣನನ್ನೇ ತಮ್ಮನೊಬ್ಬ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸಾ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ಮರಸಣಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಾವೀರ ತಮ್ಮನಿಂದಲೇ ಹತ್ಯೆಯಾದ ಸೋಂಕಿತ. ಕೆಲ ದಿನಗಳ ಹಿಂದೆ ಮಹಾವೀರನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಇರಲು ಸಾಧ್ಯವೇ ಇಲ್ಲ, ತನ್ನನ್ನು ಡಿಸ್ಚಾರ್ಜ್ ಮಾಡುವಂತೆ ಹೇಳಿ ಪಟ್ಟುಹಿಡಿದು ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದ.

ಮಹಾವೀರ ಮನೆಗೆ ಬರುತ್ತಿದ್ದಂತೆಯೇ ಅಣ್ಣ-ತಮ್ಮನ ನಡುವೆ ಜಗಳ, ಗಲಾಟೆ ಆರಂಭವಾಗಿದೆ. ಈ ವೇಳೆ ಕೋಪದ ಕೈಗೆ ಬುದ್ಧಿಕೊಟ್ಟ ತಮ್ಮ ಅಣ್ಣ ಮಹಾವೀರನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img