Tuesday, June 15, 2021
Homeಸುದ್ದಿ ಜಾಲ4 ಕಂದಾಯ ವಿಭಾಗಕ್ಕೆ 10 ಕ್ರಯೋಜನಿಕ್‌ ಆಮ್ಲಜನಕ ಟ್ಯಾಂಕರ್‌ : ಸಚಿವ ನಿರಾಣಿ

ಇದೀಗ ಬಂದ ಸುದ್ದಿ

4 ಕಂದಾಯ ವಿಭಾಗಕ್ಕೆ 10 ಕ್ರಯೋಜನಿಕ್‌ ಆಮ್ಲಜನಕ ಟ್ಯಾಂಕರ್‌ : ಸಚಿವ ನಿರಾಣಿ

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸೋಂಕಿತರ ರಕ್ಷಣೆಗೆ ಪ್ರಮುಖವಾಗಿ 10 ಕ್ರಯೋಜೆನಿಕ್‌ ಆಮ್ಲಜನಕ ಟ್ಯಾಂಕರ್‌ಗಳನ್ನು ಪ್ರತಿ ಕಂದಾಯ ವಿಭಾಗಗಳಿಗೆ 2 ಟ್ಯಾಂಕರ್‌ಗಳು ಹಾಗೂ ಕರಾವಳಿಗೆ ಪ್ರತ್ಯೇಕವಾಗಿ 2 ಟ್ಯಾಂಕರ್‌ ನೀಡಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಸೂಚನೆ ನೀಡಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಗಣಿ ಮತ್ತು ಭೂವಿಜ್ಞಾನ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ನಿದೇರ್ಶಕ ಪಿ.ಆರ್‌ ರವೀಂದ್ರ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

10 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗುತ್ತದೆ. ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಗಣಿ ಮತ್ತು ಭೂವಿಜ್ಞಾನ ವಿಭಾಗದ ಸಮಿತಿಯು ಆಸ್ಪತ್ರೆ ಗುರುತಿಸುವ ಹೊಣೆಗಾರಿಕೆಯನ್ನು ಸಭೆ ನೀಡಿದೆ. ಇನ್ನು ಗಣಿ ಇಲಾಖೆಯಿಂದ 1000 ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಿ ಅವುಗಳನ್ನು ಎಲ್ಲಾ ಜಿಲ್ಲೆಗಳಿಗೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಇದನ್ನೂ ಓದಿ :ಸರ್ಕಾರಗಳು ವಿಫ‌ಲವಾಗಿದ್ದೆ 2ನೇ ಅಲೆ ತೀವ್ರತೆಗೆ ಕಾರಣ

ಹೆಚ್ಚಿನ ಸಂಖ್ಯೆಯ ಆಕ್ಸಿಮೀಟರಗಳನ್ನು ಸಂಗ್ರಹಿಸಿ ಇವುಗಳನ್ನು ಗ್ರಾಮ ಪಂಚಾಯಿತಿ ಆರೋಗ್ಯ ಸಮಿತಿಗಳಿಗೆ ನೀಡಲಾಗುವುದು. ಇದನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀಡಿದರೆ, ಗ್ರಾಮಸ್ಥರಿಗೆ ಆಮ್ಲಜನಕದ ಶುದ್ಧತ್ವವನ್ನು ನಿಯಮಿತವಾಗಿ ಪರಿಶೀಲಿಸಬಹುದು ಎಂದು ಸಲಹೆ ನೀಡಿದರು.

ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನಲ್ಲಿರುವ ಹಟ್ಟಿ ಗೋಲ್ಡ್ ಮೈನ್ಸ್‌ ಕ್ಯಾಂಪ್‌ನಲ್ಲಿ ಆಸ್ಪತ್ರೆಯಲ್ಲಿ ನರ್ಸಿಂಗ್‌ ಕಾಲೇಜು ಸ್ಥಾಪಿಸಿಸಲು ತೀರ್ಮಾನಿಸಲಾಗಿದೆ. ಇದರಿಂದ ರಾಯಚೂರು ಜಿಲ್ಲೆಯ ಪ್ಯಾರಾ-ಮೆಡಿಸಿನ್‌ ಮತ್ತು ದಾದಿಯರಿಗೆ ಹೆಚ್ಚಿನ ಅನುಕೂಲವಾಗಲಿದ್ದು ಈ ಆಸ್ಪತ್ರೆಯಲ್ಲಿ ವಿಶೇಷ ಆಮ್ಲಜನಕ ಜನರೇಟರ್‌ ಸ್ಥಾವರವನ್ನು ಸ್ಥಾಪಿಸಲು ನಿರಾಣಿ ಸೂಚಿಸಿದರು. ಯಾವ ಜಿಲ್ಲೆಗಳಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಇದೆಯೋ ಅಂತಹ ಕಡೆ ಮೊದಲ ಆದ್ಯತೆಯಾಗಿ ಹೆಚ್ಚಿನ ಗಮನ ಹರಿಸಬೇಕು. ಸೋಂಕಿತರ ಪ್ರಾಣ ರಕ್ಷಣೆಗೆ ಇಲಾಖೆ ವತಿಯಿಂದ ಎಲ್ಲಾ ಕ್ರಮಗಳನ್ನು ತೆಗೆದುಕೊಳುವಂತೆ ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img