Monday, June 14, 2021
Homeಅಂತರ್ ರಾಷ್ಟ್ರೀಯಚೀನಾದ ನಗರಗಳಲ್ಲಿ ಬೀಸಿದ ಭಾರೀ ಸುಂಟರಗಾಳಿ; 12 ಮಂದಿ ಸಾವು, 250ಕ್ಕೂ ಹೆಚ್ಚು ಜನರು ...

ಇದೀಗ ಬಂದ ಸುದ್ದಿ

ಚೀನಾದ ನಗರಗಳಲ್ಲಿ ಬೀಸಿದ ಭಾರೀ ಸುಂಟರಗಾಳಿ; 12 ಮಂದಿ ಸಾವು, 250ಕ್ಕೂ ಹೆಚ್ಚು ಜನರು ಗಾಯಾಳು

ಬೀಜಿಂಗ್‌ : ಚೀನಾದ ವುಹಾನ್ ಹಾಗೂ ಸುತ್ತೋ ನಗರಗಳಲ್ಲಿ ಬೀಸಿದ ಭಾರೀ ಸುಂಟರಗಾಳಿ. ಇದರಿಂದಾಗಿ 10 ಕ್ಕೂ ಹೆಚ್ಚು ಮಂದಿ ಮೃತಪಟ್ಟು 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ವುಹಾನ್ ನಗರದಲ್ಲಿ ಪ್ರತಿ ಸೆಕೆಂಡ್‌ಗೆ 23.9 ಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿಗೆ ಈ ದುರಂತ ಸಂಭವಿಸಿದ್ದು , ಘಟನೆಯಲ್ಲಿ ಹಲವು ಕಟ್ಟಡಗಳು ಹಾಗೂ ಮರಗಳು ಧರೆಗುರುಳಿವೆ . ಇಂದು ಮುಂಜಾನೆ 27 ಮನೆಗಳು ಕುಸಿದಿವೆ . ಎರಡು ಟವರ್ ಕ್ರೇನ್’ಗಳು ಹಾಗೂ 8 ಸಾವಿರ ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿದ್ದ ಕಟ್ಟಡಕ್ಕೂ ಭಾರಿ ಹಾನಿಯಾಗಿದೆ ಎಂದು ವರದಿಗಳು ತಿಳಿಸಿದೆ .

ಸುಝನಗರದ ಜಿಯಾಂಗ್ಗು ಪ್ರದೇಶದಲ್ಲಿ ಬೀಸಿದ ಬಿರುಗಾಳಿಗೆ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು , 21 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ . ಈ ಬಿರುಗಾಳಿಗೆ ವಿದ್ಯುತ್ ಕಂಬಗಳು ಧರೆಗುರುಳಿವೆ .

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img