Tuesday, June 15, 2021
Homeಸುದ್ದಿ ಜಾಲಅಂತ್ಯಸಂಸ್ಕಾರದಲ್ಲಿ ಮಾನವೀಯತೆ ಮೆರೆದ ಮುಸ್ಲಿಂ ಸಮಾಜದ ಯುವಕರು

ಇದೀಗ ಬಂದ ಸುದ್ದಿ

ಅಂತ್ಯಸಂಸ್ಕಾರದಲ್ಲಿ ಮಾನವೀಯತೆ ಮೆರೆದ ಮುಸ್ಲಿಂ ಸಮಾಜದ ಯುವಕರು

ದೇಶದಲ್ಲಿ ಕೊರೋನಾ ರಣಕೇಕೆ ಹಾಕಿ ಭಾರಿ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಕೊರೋನ ತಗುಲಿ ಮೃತಪಟ್ಟ ವ್ಯಕ್ತಿಯನ್ನು ಮುಟ್ಟೋಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಗೌರವಿತವಾಗಿ ಅಂತ್ಯಸಂಸ್ಕಾರ ಮಾಡುವುದರ ಮುಖಾಂತರ ತಮ್ಮನ್ನು ತಾವು ತೊಡಗಿಸಿಕೊಂಡು ಮಾನವೀಯತೆ ಮೆರೆದ ರಬಕವಿಯ ಮುಸ್ಲಿಂ ಸಮಾಜದ ಯುವಕರ ಕೆಲಸ ಶ್ಲಾಘನೀಯವಾದದ್ದು. ಯಾವುದೇ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಆತನು ಗೌರವಿತವಾಗಿ ಅಂತ್ಯಸಂಸ್ಕಾರ ಮಾಡಿ ಆತನಿಗೆ ಗೌರವ ಸಲ್ಲಿಸುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಡಾ. ಪದ್ಮಜೀತ ನಾಡಗೌಡಪಾಟೀಲ ಹೇಳಿದರು.

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಡಾ. ಪದ್ಮ ಜೀತ ನಾಡಗೌಡ ಪಾಟೀಲ ಫೌಂಡೇಶನ ವತಿಯಿಂದ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳನ್ನು ಸ್ವಯಂಪ್ರೇರಿತವಾಗಿ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ರಬಕವಿ ಮುಸ್ಲಿಂ ಯುವಕರಾದ ಅಸ್ಲಾಂ ಕಿಲ್ಲೇದಾರ. ಅಬೂಬಕ್ಕರ್ ಬಂಡೇಬುರುಜ. ಇಸ್ಮೈಲ್ ನಮಾಜಕಟ್ಟಿ. ಮೋಸಿನ ಗೋಕಾಕ. ಆಸಿಫ ಗೊಕಾಕ. ಮೋಸಿನ ಅತ್ತಾರ. ಯಾಸೀನ ಅತ್ತರ. ಜಮೀಲ್ ಪನಿ ಬಂದ. ವಾಜಿದ್ ಲೇಂಗ್ರೆ. ಸೇರಿದಂತೆ ಮುಂತಾದ ಯುವಕರಿಗೆ ಸನ್ಮಾನ ಮಾಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಸಂಜಯ ಅಮ್ಮನಿಗಿಮಠ. ಭೀಮಶಿ ಪಾಟೀಲ. ಮೋನಪ್ಪ ಹೆಗ್ಗಣ್ಣವರ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ
ವಿ ನ್ಯೂಸ್ 24 ಕನ್ನಡ
ಬಾಗಲಕೋಟೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img