Monday, June 14, 2021
Homeಸುದ್ದಿ ಜಾಲಬ್ಲಾಕ್ ಫಂಗಸ್ ಗೆ ಇಂಜಕ್ಷನ್; ಶಾಲಾ-ಕಾಲೇಜುಗಳಲ್ಲಿ ವ್ಯಾಕ್ಸಿನ್ ನೀಡಲು ತೀರ್ಮಾನ -ಡಿಸಿಎಂ ಅಶ್ವತ್ಥ ನಾರಾಯಣ

ಇದೀಗ ಬಂದ ಸುದ್ದಿ

ಬ್ಲಾಕ್ ಫಂಗಸ್ ಗೆ ಇಂಜಕ್ಷನ್; ಶಾಲಾ-ಕಾಲೇಜುಗಳಲ್ಲಿ ವ್ಯಾಕ್ಸಿನ್ ನೀಡಲು ತೀರ್ಮಾನ -ಡಿಸಿಎಂ ಅಶ್ವತ್ಥ ನಾರಾಯಣ

ಬೆಂಗಳೂರು: ಇನ್ಮುಂದೆ ಕೋವ್ಯಾಕ್ಸಿನ್ 2ನೇ ಡೋಸ್ ಮಾತ್ರ ನೀಡಲು ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಮೊದಲ ಡೋಸ್ ನೀಡಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಮಾತನಾಡಿದ ಅವರು, ಕೋವಿಶೀಲ್ಡ್ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ಕರೆಯಲಾಗುತ್ತಿದ್ದು, 2 ಕೋಟಿ ಲಸಿಕೆ ತರಿಸಲು ಚರ್ಚಿಸಲಾಗಿದೆ. ಆಸ್ಪತ್ರೆ ಹೊರತಾಗಿ ಶಾಲಾ-ಕಾಲೇಜುಗಳಲ್ಲೂ ಲಸಿಕೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ಖಾಸಗಿ ವೈದ್ಯರು ಸಲಹೆ ನೀಡಿದ ಸೋಂಕಿತರಿಗೂ ಸರ್ಕಾರಿ ಮೆಡಿಕಲ್ ಕಿಟ್ ವಿತರಿಸಬೇಕು. ಸ್ಥಳಿಯ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಸಿಸಿ ಸ್ಥಾಪಿಸಲಾಗುತ್ತಿದ್ದು, ಇನ್ಮುಂದೆ ಕೊರೊನಾ ಪಾಸಿಟಿವ್ ಬಂದವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು. ಅಲ್ಲದೇ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗುತ್ತಿರುವುದರಿಂದ ಬ್ಲ್ಯಾಕ್ ಫಂಗಸ್ ಗೂ ಇಂಜಕ್ಷನ್ ನೀಡಲು ತೀರ್ಮಾನಿಸಲಾಗಿದ್ದು, 20,000 ವಯಲ್ಸ್ ಗೆ ಕೇಂದ್ರಕ್ಕೆ ಬೆಡಿಕೆ ಇಡಲಾಗುವುದು ಎಂದು ವಿವರಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img