Tuesday, June 15, 2021
Homeಸುದ್ದಿ ಜಾಲಕೊರೋನಾ : 100ಕ್ಕೂ ಹೆಚ್ಚು ನಕ್ಸಲರಿಗೆ ಸೋಂಕು, 10 ನಾಯಕರು ಸಾವನ್ನಪ್ಪಿರುವ ಶಂಕೆ

ಇದೀಗ ಬಂದ ಸುದ್ದಿ

ಕೊರೋನಾ : 100ಕ್ಕೂ ಹೆಚ್ಚು ನಕ್ಸಲರಿಗೆ ಸೋಂಕು, 10 ನಾಯಕರು ಸಾವನ್ನಪ್ಪಿರುವ ಶಂಕೆ

ಬಸ್ತರ್​: ದೇಶದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೀಗ ನಕ್ಸಲರನ್ನು ಸಹ ಕೊರೋನಾ ವೈರಸ್ ಕಾಡುತ್ತಿದೆ ಎಂದು ತಿಳಿದು ಬಂದಿದೆ. ಛತ್ತೀಸಗಡದ ದಕ್ಷಿಣ ಬಸ್ತಾರ್​ ಅರಣ್ಯ ಪ್ರದೇಶದಲ್ಲಿರುವ ನಕ್ಸಲರಿಗೆ ಕೊರೊನಾ ಸೋಂಕು ತಗುಲಿದ್ದು, 10 ನಕ್ಸಲರು ಸಾವನ್ನಪ್ಪಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಸುಕ್ಮಾ, ದಂತೇವಾಡ, ಬಿಜಾಪುರ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ 100ಕ್ಕೂ ಹೆಚ್ಚು ನಕ್ಸಲರಿಗೆ ಕೊರೊನಾ ತಗುಲಿದೆ. ಹಲವರು ವಿಷಾಹಾರ ಸೇವನೆಯಿಂದ ಬಳಲುತ್ತಿರುವುದಾಗಿ ಪೊಲೀಸ್​ ಇಲಾಖೆಗೆ ಮಾಹಿತಿ ಸಿಕ್ಕಿದೆ.

ಇನ್ನು ನಕ್ಸಲ್‌ ನಾಯಕಿ ಸುಜಾತ, ಜಯಲಾಲ್​ ಮತ್ತು ದಿನೇಶ್​ ಸೇರಿದಂತೆ 10 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img