Monday, June 14, 2021
Homeಸುದ್ದಿ ಜಾಲಎಚ್ಚರ..!ಆಕ್ಸಿಜನ್‌, ರೆಮ್ಡೆಸಿವಿರ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ..ವಂಚನೆ

ಇದೀಗ ಬಂದ ಸುದ್ದಿ

ಎಚ್ಚರ..!ಆಕ್ಸಿಜನ್‌, ರೆಮ್ಡೆಸಿವಿರ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ..ವಂಚನೆ

ಬೆಂಗಳೂರು: ಕೋವಿಡ್​- 19 ಸಮಯದಲ್ಲಿ ಹೊಸ ವ್ಯಾಪಾರ ಶುರು ಮಾಡಲು ಹೊರಟ ಉದ್ಯಮಿಗೆ ಮತ್ತು ಕೊರೊನಾ ಚಿಕಿತ್ಸೆಗೆ ಯಂತ್ರ, ಔಷಧ ಖರೀದಿಗೆ ಮುಂದಾಗುವರಿಗೂ ಸೈಬರ್​ ಕಳ್ಳರು ವಂಚನೆ ಮಾಡಿದ್ದಾರೆ. ಆಕ್ಸಿಜನ್​ ಪೂರೈಕೆ ಯಂತ್ರ ಕೊಡುವುದಾಗಿ ವ್ಯಕ್ತಿಯೊಬ್ಬರಿಂದ 12.69 ಲಕ್ಷ ರೂ. ಪಡೆದು ವಂಚನೆ ಮಾಡಿದ್ದರೇ ಮತ್ತೊಂದು ಪ್ರಕರಣದಲ್ಲಿ ರೆಮ್​ಡೆಸಿವಿರ್​ ಚುಚ್ಚುಮದ್ದು ಏಜೆನ್ಸಿ ಆಮಿಷವೊಡ್ಡಿ ವ್ಯಾಪಾರಿಯಿಂದ 4.70 ಲಕ್ಷ ರೂ. ಪಡೆದು ಮಾಡಿದ್ದಾರೆ.

ಭೂಪಸಂದ್ರದ 48 ವರ್ಷದ ವ್ಯಕ್ತಿ, ಕೋವಿಡ್​ ಚಿಕಿತ್ಸೆ ಕೊಡುವಾಗ ಬಳಸುವ ಆಕ್ಸಿಜನ್​ ಯಂತ್ರ ಖರೀದಿಸಲು ಆನ್​ಲೈನ್​ನಲ್ಲಿ ಸರ್ಚ್​ ಮಾಡಿ ಸುರಭಿ ಎಂಟರ್​ ಪೆ.ಲಿ.ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ಆಕ್ಸಿಜನ್​ ಯಂತ್ರ ಕಳುಹಿಸುವುದಾಗಿ ಹೇಳಿ ಮೇ 2ರಿಂದ 8ವರೆಗೂ ಹಂತ ಹಂತವಾಗಿ ನಾನಾ ಕಾರಣ ಹೇಳಿ 12.69 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ಮತ್ತೆ ಹಣ ಕೇಳಿದ್ದಾಗ ಅನುಮಾನ ಬಂದು ತಾನು ಕೊಟ್ಟಿರುವ ಹಣ ವಾಪಸ್​ ಕೇಳಿದ್ದಾರೆ. ಆರೋಪಿ ಕರೆ ಸ್ಥಗಿತ ಮಾಡಿದ್ದಾನೆ. ನೊಂದ ವ್ಯಕ್ತಿ, ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಜಾಲಹಳ್ಳಿಯ 42 ವರ್ಷದ ವ್ಯಕ್ತಿ, ತನ್ನ ತಾಯಿಗೆ ಅನಾರೋಗ್ಯದ ಆನ್​ಲೈನ್​ನಲ್ಲಿ ಔಷಧ ಆರ್ಡರ್​ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಔಷಧ 20 ಸಾವಿರ ರೂ. ಆಗುತ್ತದೆ. ಮೊದಲು ಹಣ ನೀಡಿದರೇ ಮನೆಗೆ ಪಾರ್ಸೆಲ್​ ಕಳುಹಿಸುವುದಾಗಿ ಹೇಳಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ, ಎಷ್ಟು ಹೊತ್ತಾದರೂ ಔಷಧ ಬಾರದೆ ಇದ್ದಾಗ ವಾಪಸ್​ ಕರೆ ಮಾಡಿದ್ದಾರೆ. ಅಷ್ಟೊತ್ತಿಗೆ ಅಪರಿಚಿತ ವ್ಯಕ್ತಿ ಮೊಬೈಲ್​ ನಂಬರ್​ ಸ್ವಿಚ್​ ಆ​ ಆಗಿತ್ತು. ಕೊನೆಗೆ ಗ್ರಾಹಕ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಎಲ್ಲ ಪ್ರಕರಣಗಳು ಒಂದೇ ದಿನ ನಡೆದಿದ್ದು, ಉತ್ತರ ವಿಭಾಗ ಸಿಇಎನ್​ ಠಾಣೆಯಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೆಮ್ಡೆಸಿವಿರ್ಏಜೆನ್ಸಿ ಸೋಗದಲ್ಲಿ ವಂಚನೆ
ಬನಶಂಕರಿ 2ನೇ ಹಂತದಲ್ಲಿ ಔಷಧ ಸರಬರಾಜು ಏಜೆನ್ಸಿ ನಡೆಸುವ ವ್ಯಾಪಾರಿ, ಕರೊನಾ ಸೋಂಕಿಗೆ ನೀಡುತ್ತಿರುವ ರೆಮ್​ಡೆಸಿವಿರ್​ ಚುಚ್ಚುಮದ್ದು ಏಜೆನ್ಸಿ ಪಡೆಯಲು ಹುಡುಕಾಟ ನಡೆಸುತ್ತಿದ್ದರು. ಆಗ ಗುಜರಾತ್​ ಮೂಲದ ಕೌಶಲ್​ ಮಹೇಂದ್ರ ಕುಮಾರ್​ ಎಂಬಾತ ಕರೆ ಮಾಡಿ ರೆಮ್​ಡೆಸಿವಿರ್​ ಏಜೆನ್ಸಿ ಕೊಡಿಸುವುದಾಗಿ ಹೇಳಿ ನಂಬಿಸಿ 4.70 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆನಂತರ ವ್ಯಾಪಾರಿಯ ಕರೆ ಸ್ವೀಕರಿಸಿದೆ ಇದ್ದಾಗ ಅವರ ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ದಣ ವಿಭಾಗ ಸಿಇಎನ್​ ಠಾಣೆ ಪೊಲೀಸರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img