Tuesday, June 15, 2021
Homeಸುದ್ದಿ ಜಾಲಬೆಂಗಳೂರಿನ ಜನರಿಗೆಂದೇ ಸಿದ್ಧವಾಯ್ತು ಆಕ್ಸಿಜನ್ ಬಸ್..!

ಇದೀಗ ಬಂದ ಸುದ್ದಿ

ಬೆಂಗಳೂರಿನ ಜನರಿಗೆಂದೇ ಸಿದ್ಧವಾಯ್ತು ಆಕ್ಸಿಜನ್ ಬಸ್..!

ರಾಜ್ಯದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿರುವ ನಡುವಲ್ಲೇ ಪ್ರಾಣವಾಯುವಿನ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ ರಾಜಧಾನಿ ಮಂದಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ರಾಜಧಾನಿಯ ಮೂಲೆ ಮೂಲೆಗಳಲ್ಲಿ ಆಕ್ಸಿ ಬಸ್ ಸಂಚರಿಸಲಿದ್ದು ಈ ಕಾರ್ಯಕ್ರಮಕ್ಕೆ ಆರೋಗ್ಯ ಸೌಧದಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

ಇದೊಂದು ಮೊಬೈಲ್ ಆಕ್ಸಿ ಬಸ್ ಆಗಿದ್ದು ಬಿಬಿಎಂಪಿ ವತಿಯಿಂದ ಒಟ್ಟು 20 ಬಸ್ಗಳನ್ನ ತಯಾರು ಮಾಡಲಾಗಿದೆ. ಟ್ರಾಸ್ ಎನರ್ಜಿ ಮಾಚನಿ ಗ್ರೂಪ್ ಕೇವಲ 2 ದಿನಗಳಲ್ಲಿ ಈ ಪ್ರಾಣವಾಯು ಬಸ್ಗಳನ್ನ ಸಿದ್ಧಪಡಿಸಿದೆ. ಇದರಲ್ಲಿ 8 ಸೀಟ್ಗಳಿದ್ದು ಪ್ರತಿ ಸೀಟ್ನಲ್ಲಿಯೂ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ.
ತಮಿಳುನಾಡಿನಲ್ಲಿಯೂ ಜೆನ್ ಇಂಟರ್ನ್ಯಾಷನಲ್ ಎಂಬ ಸಂಘಟನೆಯು ಶಾಲಾ ಬಸ್ಗಳನ್ನ ಬಳಕೆ ಮಾಡಿಕೊಂಡು ಈ ರೀತಿ ಗಾಲಿ ಮೇಲೆ ಆಮ್ಲಜನಕ ಎಂಬ ಸೇವೆಯನ್ನ ಆರಂಭಿಸುವ ಮೂಲಕ ಭಾರೀ ಗಮನ ಸೆಳೆದಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img