Monday, June 14, 2021
Homeಅಂತರ್ ರಾಜ್ಯಬಿಹಾರ : ಸಿಡಿಲು ಬಡಿದು 6 ಮಂದಿ ಸಾವು

ಇದೀಗ ಬಂದ ಸುದ್ದಿ

ಬಿಹಾರ : ಸಿಡಿಲು ಬಡಿದು 6 ಮಂದಿ ಸಾವು

ಪಾಟ್ನಾ: ದೇಶಾದ್ಯಂತ ಸದ್ಯ ಅಕಾಲಿಕ ಗುಡುಗು ಮಳೆಯೂ ಆರಂಭವಾಗಿದ್ದು, ಬಿಹಾರದಲ್ಲಿ ಸಿಡಿಲ ಬಡಿತಕ್ಕೆ ಸೋಮವಾರ 6 ಮಂದಿ ಬಲಿಯಾಗಿದ್ದಾರೆ.

ಪಾಟ್ನಾದಲ್ಲಿ ಸೋಮವಾರ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಹಾಗೇ ಸುಪಾಲ್, ದರ್ಭಂಗಾ, ಮಾಧೇಪುರ ಮತ್ತು ಮುಜಾಫರ್ಪುರ ಎಂಬ ಪ್ರದೇಶಗಳಲ್ಲಿ ತಲಾ ಒಬ್ಬರಂತೆ ಗುಡುಗು ಸಹಿತ ಮಳೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಮೇ 12 ರೊಳಗೆ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದೆರಡು ದಿನಗಳಿಂದ ಗುಡುಗು ಸಿಡಿಲಿನಿಂದ ಏಳು ಜನರು ಸಾವನ್ನಪ್ಪಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img