Monday, June 14, 2021
Homeಸುದ್ದಿ ಜಾಲಕಾರವಾರ ಲಾಕ್ ಡೌನ್ ಯಶಸ್ವಿ ; 166 ದ್ವಿಚಕ್ರ ವಾಹನ ವಶ, 49800...

ಇದೀಗ ಬಂದ ಸುದ್ದಿ

ಕಾರವಾರ ಲಾಕ್ ಡೌನ್ ಯಶಸ್ವಿ ; 166 ದ್ವಿಚಕ್ರ ವಾಹನ ವಶ, 49800 ರೂ.ದಂಡ ವಸೂಲಿ

ಕಾರವಾರ : ಜಿಲ್ಲೆಯಲ್ಲಿ ಲಾಕ್ ಡೌನ್ ಯಶಸ್ವಿಯಾಗಿದೆ.ಪೋಲೀಸರು ಕಟ್ಟು ನಿಟ್ಟಾಗಿ ದ್ವಿಚಕ್ರ ವಾಹನ. ಓಡಾಟಕ್ಕೆ ಬ್ರೇಕ್ ಹಾಕಿದರು. ತರಕಾರಿ ಅಗತ್ಯ ವಸ್ತು ಖರೀದಿಗೆ ಬಂದವರು , ಇದ್ದ ದುಡ್ಡನ್ನು ದಂಡ ಕಟ್ಟಿ, ವಾಹನವನ್ನು ಪೊಲೀಸರ ವಶಕ್ಕೆ ಬಿಟ್ಟು ನಡೆದರು.

ಜಿಲ್ಲೆಯ ಕಾರವಾರದಲ್ಲಿ ಟ್ರಾಫಿಕ್ ಪೊಲೀಸರು 3800, ಶಿರಸಿ ನಗರ , ಗ್ರಾಮೀಣ, ಶಿರಸಿ ಎನ್ ಎಮ್ ಠಾಣೆಯಿಂದ ಕ್ರಮವಾಗಿ 3500, 4000 , 5500, ಹೊನ್ನಾವರ, ಮುಂಡಗೋಡ, ದಾಂಡೇಲಿ ಪಟ್ಟಣಗಳಿಂದ ತಲಾ 6000 ರೂ .ದಂಡ ದ್ವಿಚಕ್ರವಾಹನಗಳಿಂದ ವಸೂಲಾಗಿದೆ.

ಉಳಿದ ತಾಲೂಕಾ ಕೇಂದ್ರ ಸೇರಿ ಸೋಮವಾರ ಒಂದೇ ದಿನ‌ 49800 ರೂ. ವಸೂಲಾಗಿದೆ. ಬಿಗಿ ಬಂದೋಬಸ್ತ ಜನರಲ್ಲಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದೆ. ಅತೀ ಕಠಿಣ ಕ್ರಮ ಆಸ್ಪತ್ರೆಗೆ ತೆರಳುವವರಲ್ಲಿ ಸಹ ಭಯ ಹುಟ್ಟಿಸಿದೆ.‌ ಮೊದಲ ದಿನದ ಲಾಕ್ ಡೌನ್ ಅಂತೂ ಯಶಸ್ವಿಯಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img