Monday, June 14, 2021
Homeಸುದ್ದಿ ಜಾಲಗೋವಾದಲ್ಲಿ ಇನ್ನು 8-10 ದಿನಗಳಲ್ಲಿ ಸೋಂಕಿನಿಂದ ಮೃತರಾಗುವವರ ಸಂಖ್ಯೆ ಇಳಿಕೆ : ಸಿಎಂ ಪ್ರಮೋದ ಸಾವಂತ್

ಇದೀಗ ಬಂದ ಸುದ್ದಿ

ಗೋವಾದಲ್ಲಿ ಇನ್ನು 8-10 ದಿನಗಳಲ್ಲಿ ಸೋಂಕಿನಿಂದ ಮೃತರಾಗುವವರ ಸಂಖ್ಯೆ ಇಳಿಕೆ : ಸಿಎಂ ಪ್ರಮೋದ ಸಾವಂತ್

ಪಣಜಿ: ರಾಜ್ಯದಲ್ಲಿ ಮುಂಬರುವ 8 ರಿಂದ 10 ದಿನಗಳಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಾವಂತ್, ಕೋವಿಡ್ ಸೋಂಕಿತರು ಸೋಂಕಿನ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಯಲ್ಲಿ ಸಮಯೋಚಿತ ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು. ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿಲ್ಲ ಎಂದರು.

ಇನ್ನು, ರೋಗಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ನಾನು ವಿನಮ್ರವಾಗಿ ಜನತೆಯಲ್ಲಿ ಮನವಿ ಮಾಡುತ್ತೇನೆ. ಸೋಂಕಿನ ಲಕ್ಷಣಗಳಿರುವವರು ಚಿಕಿತ್ಸೆ ಪಡೆದುಕೊಳ್ಳಲು ವಿಳಂಬ ಮಾಡುವುದರಿಂದ ಸೋಂಕಿತರು ಗುಣಮುಖರಾಗುವ ಸಾಧ್ಯತೆ ಕಡಿಮೆಯಿರುತ್ತದೆ. ಹಾಗಾಗಿ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಚಿಕಿತ್ಸೆಗೆ ಒಳಗಾಗಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img