Tuesday, June 15, 2021
Homeಸುದ್ದಿ ಜಾಲಅಲ್ ಅನ್ಸಾರ್ ಪತ್ರಿಕೆಯ ಪ್ರಕಾಶಕ ಇಬ್ರಾಹೀಂ ಬಾವಾ ಹಾಜಿ ನಿಧನ

ಇದೀಗ ಬಂದ ಸುದ್ದಿ

ಅಲ್ ಅನ್ಸಾರ್ ಪತ್ರಿಕೆಯ ಪ್ರಕಾಶಕ ಇಬ್ರಾಹೀಂ ಬಾವಾ ಹಾಜಿ ನಿಧನ

ಮಂಗಳೂರು, ಮೇ 10: ಲೇಖಕ, ಪ್ರಕಾಶಕ, ಸಮಾಜ ಸೇವಕ, ಅನಾಥ ಮಕ್ಕಳ ಪಾಲಕ ಮಂಗಳೂರಿನ ಇಬ್ರಾಹೀಂ ಬಾವಾ ಹಾಜಿ (72) ಸೋಮವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮಂಗಳೂರಿನ ಬಂದರ್‌ನ ಕಂದಕ್‌ನಲ್ಲಿ ಬಿಎಂ ಅಹ್ಮದ್ ಹಾಜಿ ಮತ್ತು ಹಲೀಮಾ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ ಎಂ. ಇಬ್ರಾಹೀಂ ಬಾವಾ ಹಾಜಿ ಬಿಎಸ್ಸಿ ಪದವೀಧರ. ಮುಂಬೈಯಲ್ಲಿ ಪದವಿ ಮುಗಿಸಿದ ಬಳಿಕ ಅಲ್ಲಿನ ‘ಹಮ್‌ದರ್ದ್’ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ಬಳಿಕ ಊರಿಗೆ ಮರಳಿ ಅಡಿಕೆ ವ್ಯಾಪಾರ ಆರಂಭಿಸಿದರು. ನಂತರ ತನ್ನ ತಂದೆಯ ಒಣಮೀನು, ಗೋಣಿಚೀಲದ ವ್ಯಾಪಾರವನ್ನು ಸಹೋದರರ ಜೊತೆಗೂಡಿ ಮುನ್ನೆಡೆಸತೊಡಗಿದರು.

ಬ್ಯಾರಿ, ಕನ್ನಡ, ತುಳು, ಹಿಂದಿ, ಇಂಗ್ಲಿಷ್, ಅರಬಿಕ್ ಸಹಿತ ಸುಮಾರು 18 ಭಾಷೆಗಳನ್ನು ಬಲ್ಲ ಇಬ್ರಾಹೀಂ ಬಾವಾ ಹಾಜಿ ಸರಳ ಸಜ್ಜನಿಕೆಯ ವ್ಯಕ್ತಿ. ಕೊಡುಗೈ ದಾನಿ. ಅನಾಥ ಮಕ್ಕಳ ಮೇಲೆ ವಿಶೇಷ ಪ್ರೀತಿ, ಅಭಿಮಾನ ಹೊಂದಿದ್ದ ಅವರು ಮಂಗಳೂರಿನ ಝೀನತ್ ಬಕ್ಷ್ ಯತೀಂ ಖಾನಾದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತೊಕ್ಕೊಟ್ಟು ಮಸ್ಜಿದ್ ತಾಜುಲ್ ಉಲಮಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಯಾವುದೇ ಪ್ರಚಾರವಿಲ್ಲದೆ ದಾನ ಧರ್ಮದ ಕೆಲಸಗಳನ್ನು ಮಾಡುತ್ತಿದ್ದರು. ಉಲಮಾಗಳು, ಮಸೀದಿ-ಮದ್ರಸದ ಸೇವಕರು, ಮದ್ರಸ, ದರ್ಸ್ ವಿದ್ಯಾರ್ಥಿಗಳ ಮೇಲೆ ಅಪಾರ ಗೌರವ ಹೊಂದಿದ್ದರು.

ವ್ಯಾಪಾರದ ಜೊತೆ ಸಮಾಜ ಸೇವೆಯಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿದ್ದ ಅವರು 1990ರಲ್ಲಿ ದೇರಳಕಟ್ಟೆಯಲ್ಲಿ ಅಲ್‌ ಅನ್ಸಾರ್ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಅಲ್ಲದೆ ಸನಾಬಿಲ್ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿದರು. ಬಳಿಕ ಮೊಲಾಂಜಿ ಮಾಸಿಕವನ್ನು ಹೊರತಂದರು. ಲೇಖಕರೂ ಆಗಿದ್ದ ಅವರು ಅನೇಕ ಧಾರ್ಮಿಕ ಕೃತಿಗಳನ್ನು ಹೊರತಂದು ಪ್ರಕಾಶಕರಾಗಿಯೂ ಗಮನ ಸೆಳೆದಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img