Monday, June 14, 2021
Homeಸುದ್ದಿ ಜಾಲದೇಶಾದ್ಯಂತ ಈವರೆಗೂ 17 ಕೋಟಿ ಕೊರೋನಾ ಲಸಿಕೆ ನೀಡಲಾಗಿದೆ : ಕೇಂದ್ರ ಸರ್ಕಾರ ಮಾಹಿತಿ

ಇದೀಗ ಬಂದ ಸುದ್ದಿ

ದೇಶಾದ್ಯಂತ ಈವರೆಗೂ 17 ಕೋಟಿ ಕೊರೋನಾ ಲಸಿಕೆ ನೀಡಲಾಗಿದೆ : ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೋನಾ ಒಂದೆಡೆ ಹೆಚ್ಚುತ್ತಿದೆ. ಇನ್ನೊಂದೆಡೆ ಲಸಿಕೆ ನೀಡಿಕೆ ಕಾರ್ಯವೂ ಪ್ರಗತಿಯಲ್ಲಿದೆ. ದೇಶಾದ್ಯಂತ ಈ ವರೆಗೂ ಒಟ್ಟಾರೆ 17 ಕೋಟಿ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, 18-44 ವಯಸ್ಸಿನ 2,43,958 ಫಲಾನುಭವಿಗಳು ಮೊದಲ ಡೋಸ್ ಗಳನ್ನು ಪಡೆದಿದ್ದಾರೆ. ಈ ಮೂಲಕ ದೇಶಾದ್ಯಂತ 17,01,53,432 ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

95,46,871 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ , 64,71,090 ಮಂದಿ ಎರಡನೇ ಡೋಸ್ ನ್ನೂ ಪಡೆದಿದ್ದಾರೆ. 1,39,71,341 ಮುನ್ನೆಲೆ ಕಾರ್ಯಕರ್ತರು ಮೊದಲ ಡೋಸ್, 77,54,283 ಮಂದಿ ಎರಡೂ ಡೋಸ್ ಗಳ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಇನ್ನು 45-60 ವಯಸ್ಸಿನ ಗುಂಪಿನ 5,51,74,561 ಹಾಗೂ 65,55,714 ಮಂದಿ ಅನುಕ್ರಮವಾಗಿ ಮೊದಲ ಹಾಗೂ ಎರಡನೇ ಡೋಸ್ ಗಳ ಲಸಿಕೆಯನ್ನು ಪಡೆದಿರುತ್ತಾರೆ. 60 ವರ್ಷದ ಮೇಲ್ಪಟ್ಟ 5,36,72,259 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದರೆ 1,49,77,918 ಮಂದಿ ಎರಡನೇ ಡೋಸ್ ಲಸಿಕೆಯನ್ನೂ ಪಡೆದಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img