Sunday, June 13, 2021
Homeಸುದ್ದಿ ಜಾಲಉಡುಪಿ ಜಿಲ್ಲೆಯಲ್ಲಿ 962 ಕೊರೊನಾ ಪಾಸಿಟಿವ್‌ ಪ್ರಕರಣ ಪತ್ತೆ

ಇದೀಗ ಬಂದ ಸುದ್ದಿ

ಉಡುಪಿ ಜಿಲ್ಲೆಯಲ್ಲಿ 962 ಕೊರೊನಾ ಪಾಸಿಟಿವ್‌ ಪ್ರಕರಣ ಪತ್ತೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ರವಿವಾರ 962 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 5 ಮಂದಿ ಸಾವನ್ನಪ್ಪಿದ್ದಾರೆ. ಉಡುಪಿಯ 58 ವರ್ಷದ ಇಬ್ಬರು ಪುರುಷರು, ಕುಂದಾಪುರದ 66 ವರ್ಷದ ಪುರುಷ, ಉಡುಪಿಯ 63 ವರ್ಷದ ಪುರುಷ, ಕುಂದಾಪುರದ 67 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಸೋಂಕು ತಗಲಿದವರಲ್ಲಿ 19 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 943 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ರವಿವಾರ 2550 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಯಿತು. 543 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 6,372 ಪ್ರಕರಣಗಳು ಸಕ್ರಿಯವಾಗಿವೆ.

ಲಸಿಕೆ ವಿವರ
ರವಿವಾರ 11 ಮಂದಿ ಎರಡನೆ ಬಾರಿಗೆ ಲಸಿಕೆ ಪಡೆದುಕೊಂಡಿದ್ದಾರೆ. ಇದುವರೆಗೆ ಒಟ್ಟು 1,94,805 ಮಂದಿ ಮೊದಲ ಬಾರಿಗೆ ಹಾಗೂ 57,659 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img