Tuesday, June 15, 2021
Homeಕೋವಿಡ್-19ಮಾಜಿ ಸಚಿವ ಕೆ.ಬಿ. ಶಾಣಪ್ಪ ಕೊರೊನಾಗೆ ಬಲಿ

ಇದೀಗ ಬಂದ ಸುದ್ದಿ

ಮಾಜಿ ಸಚಿವ ಕೆ.ಬಿ. ಶಾಣಪ್ಪ ಕೊರೊನಾಗೆ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಕೈಮೀರಿದ್ದು, ಸೋಂಕಿನ ಪ್ರಕರಣಗಳ ಜತೆಗೆ ಸೋಂಕಿನಿಂದಾಗಿ ಸಾಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಂಥ ಕರೊನಾಗೆ ಇದೀಗ ಮತ್ತೊಬ್ಬ ರಾಜಕಾರಣಿ ಬಲಿಯಾಗಿದ್ದಾರೆ. ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಮಾಜಿ ಸಂಸದ, ಮಾಜಿ ಸಚಿವ ಕೆ.ಬಿ. ಶಾಣಪ್ಪ ಅವರು ಇಂದು ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳ ಹಿಂದೆ ಕರೊನಾ ಸೋಂಕಿಗೆ ಒಳಗಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಅಸುನೀಗಿದರು.

ಜನತಾ ಪರಿವಾರದ ನಾಯಕ ಎಂದೇ ಖ್ಯಾತಿ ಪಡೆದಿದ್ದ ಶಾಣಪ್ಪ ಅವರು ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಬಳಿಕ ಬಿಜೆಪಿಗೆ ಸೇರಿದ್ದ ಶಾಣಪ್ಪ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಲಾಗಿತ್ತು. ನಂತರ ಅವರು ವಿಧಾನ ಪರಿಷತ್​ಗೂ ನಾಮನಿರ್ದೇಶನಗೊಂಡಿದ್ದರು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಕಾಂಗ್ರೆಸ್​ಗೆ ಸೇರಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img