Tuesday, June 15, 2021
Homeರಾಜ್ಯಆರೋಗ್ಯ ಇಲಾಖೆಯಲ್ಲಿ 'ಕಡ್ಡಾಯ ಗ್ರಾಮೀಣ ಸೇವೆ'ಗೆ ನಿಯೋಜನೆಗೊಳ್ಳುವವರಿಗೆ ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

ಆರೋಗ್ಯ ಇಲಾಖೆಯಲ್ಲಿ ‘ಕಡ್ಡಾಯ ಗ್ರಾಮೀಣ ಸೇವೆ’ಗೆ ನಿಯೋಜನೆಗೊಳ್ಳುವವರಿಗೆ ಗುಡ್ ನ್ಯೂಸ್

ಬೆಂಗಳೂರು : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಕಡ್ಡಾಯ ಗ್ರಾಮೀಣ ಸೇವೆಗೆ ನಿಯೋಜನೆಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ ಸಂಭಾವನೆಯನ್ನು ಹೆಚ್ಚಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಆರೋಗ್ಯ ಇಲಾಖೆಯಲ್ಲಿ ಕಡ್ಡಾಯ ಗ್ರಾಮೀಣ ಸೇವೆಗೆ ನಿಯೋಜನೆಗೊಳ್ಳುವ ಸ್ನಾತಕೋತ್ತರ, ಡಿಪ್ಲೋಮಾ ಪದವೀಧರರಿಗೆ ಹಾಗೂ ಸೂಪರ್ ಸ್ಪೆಷಾಲಿಟಿ ಪದವೀಧರರಿಗೆ ಸಿಹಿಸುದ್ದಿ ನೀಡಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಯ.ಶಿವಶಂಕರ್ ನಡವಳಿ ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆ, ಕೇಂದ್ರಗಳಲ್ಲಿ ಕಡ್ಡಾಯ ಸೇವೆಗೆ ನೇಮಕವಾಗುವ ಸ್ನಾತಕೋತ್ತರ, ಡಿಪ್ಲೋಮಾ ಪದವೀಧರರಿಗೆ ಹಾಗೂ ಸೂಪರ್ ಸ್ಪೆಷಾಲಿಟಿ ಪದವೀಧರರಿಗೆ ಕ್ರಮವಾಗಿ ರೂ.45,000 ಮತ್ತು ರೂ.55,000 ಗಳ ಮಾಸಿಕ ಸಂಭಾವನೆಯನ್ನು ನಿಗಧಿಪಡಿಸಲಾಗಿರುತ್ತದೆ.

ಆದ್ರೇ.. ಡಾ.ತನಿಗಲ್ ಅರಸು ಇ, ಇವರು ರಾಜ್ಯ ಸರ್ಕಾರ ಮತ್ತು ಇತರರ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಿರುವ ರಿಟ್ ಪಿಟಿಷನ್ ಸಂಬಂಧಿಸಿದಂತೆ ಘನ ನ್ಯಾಯಾಲಯವು ದಿನಾಂಕ 16-12-2020ರಂದು ನೀಡಿರುವ ತೀರ್ಪಿನಂತೆ ಇಲಾಖೆಯಲ್ಲಿ ಒಂದು ವರ್ಷ ಕಡ್ಡಾಯ ಸೇವೆಯನ್ನು ಸಲ್ಲಿಸುವ ವೈದ್ಯರುಗಳಿಗೆ ಶಿಷ್ಯ ವೇತನ, ಮಾಸಿಕ ಸಂಭಾವನೆಯನ್ನು 6 ವಾರದೊಳಗೆ ನಿಗಧಿಪಡಿಸುವಂತೆ ಸೂಚಿಸಿರುತ್ತದೆ.

ಈ ಹಿನ್ನಲೆಯಲ್ಲಿ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಇವರ ಪ್ರಾಸ್ತಾವನೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶ ದಿನಾಂಕ 16-05-2020ರಲ್ಲಿ ಕಡ್ಡಾಯ ಸರ್ಕಾರಿ ಸೇವೆ ಸಲ್ಲಿಸಿರುವ ಸೀನಿಯರ್ ರೆಸಿಡೆಂಟ್ ಮಾಸಿಕ ಶಿಷ್ಯ ವೇತನ 60,000 ನಿಗಧಿಪಡಿಸಲಾಗಿರುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ನಿಗಧಿಪಡಿಸಿರುವ ಮಾಸಿಕ ಸಂಭಾವನೆಯಲ್ಲಿ ತಾರತಮ್ಯವಿರುತ್ತದೆ. ಆದ್ದರಿಂದ ವೈದ್ಯಕೀಯ ವ್ಯಾಸಂಗವನ್ನು ಪೂರ್ಣಗೊಳಿಸಿ ಕಡ್ಡಾಯ ಸರ್ಕಾರಿ ಸೇವೆಗೆ ಒಳಪಡುವ ವೈದ್ಯರಿಗೆ ಈ ಕೆಳಕಂಡಂತೆ ಮಾಸಿಕ ಸಂಭಾವನೆಯನ್ನು ನಿಗಧಿಪಡಿಸಲು ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತದೆ.

  • ಎಂಬಿಬಿಎಸ್ – ರೂ 62,666
  • ಸ್ನಾತಕೋತ್ತರ ಪದವಿ, ಡಿಪ್ಲೊಮಾ – ರೂ.67,615
  • ಸೂಪರ್ ಸ್ಪೆಷಾಲಿಟಿ – ರೂ.72,802

ಈ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗ್ರಾಮೀಣ ಸೇವೆಗೆ ನಿಯೋಜನೆಗೊಳ್ಳುವ ಭ್ಯರ್ಥಿಗಳ ಮಾಸಿಕ ಸಂಭಾವನೆಯನ್ನು ದಿನಾಂಕ 31-03-2021ರವರೆಗೆ ಎಂಬಿಬಿಎಸ್ ಪದವೀಧರರಿಗೆ ಸಂಬಂಧಿಸಿದಂತೆ ರೂ.62,666 ಗಳನ್ನು ನಿಗಧಿ ಪಡಿಸಿದೆ. ಮುಂದುವರೆದು ಸ್ನಾತಕೋತ್ತರ ಪದವಿ, ಡಿಪ್ಲೊಮಾ ಇವರುಗಳಿಗೆ ರೂ.67,615ಗಳನ್ನು ಹಾಗೂ ದಿನಾಂಕ 01-04-2021ರಿಂದ ಸೂಪರ್ ಸ್ಪೆಷಾಲಿಟಿಗಳಿಗೆ ರೂ.70,000 ಪರಿಷ್ಕರಿಸಿ ಹಾಗೂ ಕಡ್ಡಾಯ ಗ್ರಾಮೀಣ ಸೇವೆಗೆ ನಿಯೋಜನೆಗೊಳ್ಳುವ ಅಭ್ಯರ್ಥಿಗಳಿಗೆ ವಾರ್ಷಿಕ 10 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img