Monday, June 14, 2021
Homeಸುದ್ದಿ ಜಾಲರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

ದಾವಣಗೆರೆ: ನೈರುತ್ಯ ರೈಲ್ವೆ ವಿಭಾಗವು ಹೌರಾ-ಮೈಸೂರು (08117) ಬೇಸಿಗೆ ವಿಶೇಷ ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಮೇ 7 ರಿಂದ ಜೂನ್ 25 ರವರೆಗೆ ಹಾಗೂ ಮೈಸೂರು-ಹೌರಾ (08118) ರೈಲು ಸಂಚಾರ ಸೇವೆಯನ್ನು ಮೇ 9 ರಿಂದ ಜೂ. 27 ರವರೆಗೆ ವಿಸ್ತರಿಸಿದೆ.

ಯಶವಂತಪುರ-ಹೌರಾ(06597) ಬೇಸಿಗೆ ವಿಶೇಷ ಸೂಪರ್ ಫಾಸ್ಟ್ ವೀಕ್ಲಿ ರೈಲು ಸಂಚಾರವನ್ನು ಮೇ 13 ರಿಂದ ಜೂ. 24 ರವರೆಗೆ ಹಾಗೂ ಹೌರಾ-ಯಶವಂತಪುರ (06598) ರೈಲು ಸಂಚಾರ ಸೇವೆಯನ್ನು ಮೇ 18 ರಿಂದ ಜೂ. 29 ರವರೆಗೆ ವಿಸ್ತರಿಸಿದೆ.

ರೈಲು ಸಂಚಾರ ರದ್ದು ಮುಂದುವರಿಕೆ:

ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್-ಗದಗ ಎಕ್ಸ್ ಪ್ರೆಸ್(01139) ಜೂನ್ 30 ರವರೆಗೆ ಹಾಗೂ ಗದಗ-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (01140) ರೈಲು ಸಂಚಾರ ರದ್ದು ಜುಲೈ 1 ರವರೆಗೆ ಮುಂದುವರೆಸಲಾಗಿದೆ. ಈ ಮೊದಲು ಮೇ. 10 ರವರೆಗೆ ರೈಲು ಸಂಚಾರ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img