Tuesday, May 11, 2021
Homeಸುದ್ದಿ ಜಾಲ`PVC' ಆಧಾರ್ ಕಾರ್ಡ್ ಪಡೆಯುವುದು ಹೇಗೆ?

ಇದೀಗ ಬಂದ ಸುದ್ದಿ

`PVC’ ಆಧಾರ್ ಕಾರ್ಡ್ ಪಡೆಯುವುದು ಹೇಗೆ?

ಆಧಾರ್ ಕಾರ್ಡ್.. ಮಕ್ಕಳನ್ನ ಶಾಲೆಗೆ ಸೇರಿಸುವುದರಿಂದ ಹಿಡಿದು ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಈ ಕಾರ್ಡ್ ಬಳಸಲಾಗುತ್ತೆ. ಆಧಾರ್ ನಮ್ಮ ಗುರುತನ್ನು ಸಾಬೀತು ಪಡಿಸುವ ದಾಖಲೆ. ಹೀಗಿದ್ದಾಗ ಆಧಾರ್ ಕಾರ್ಡ್ ನಿಮ್ಮ ಜತೆಯಲ್ಲಿ ಕೊಂಡೊಯ್ಯುವುದು ತುಂಬಾನೇ ಅಗತ್ಯ ಅಲ್ವಾ. ಆದ್ರೆ, ಇಷ್ಟುದ್ದಾಗ ಆಧಾರ್ ತೆಗೆದುಕೊಂಡೋಕೆ ಕಿರಿಕಿರಿ ಆಗ್ತಿದೆ ಅನ್ನೋರಿಗೆ ಅಂತಾನೇ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೊಸದಾಗಿ ಪಿವಿಸಿ ಆಧಾರ್ ಕಾರ್ಡ್ ಪರಿಚಯಿಸಿದೆ.

ಹೌದು, ಪಿವಿಸಿ ಕಾರ್ಡ್ ಗಳಲ್ಲಿ ಆಧಾರ್ ಕಾರ್ಡ್ ರೀಫ್ರಿಂಟ್ ಅಥ್ವಾ ಮರುಮುದ್ರಣ ಮಾಡುವ ಸೌಲಭ್ಯವನ್ನ ಯುಐಡಿಎಐ ಒದಗಿಸುತ್ತಿದೆ. ಈ ಕಾರ್ಡ್ ನೋಡಲು ಥೇಟ್ ಎಟಿಎಂ ಕಾರ್ಡ್ ನಂತೆಯೇ ಇರಲಿದ್ದು, ನಿಮ್ಮ ವಾಲೆಟ್ ಅಥ್ವಾ ಪರ್ಸ್ ನಲ್ಲಿ ಆರಾಮಾಗಿ ಇಟ್ಟುಕೊಳ್ಳಬಹುದು.

ಯುಐಡಿಎಐ, ಪಾಲಿವಿನಿಲ್ ಕ್ಲೋರೈಡ್ (ಪಿವಿಸಿ) ಕಾರ್ಡ್ ನಲ್ಲಿ ಆಧಾರ್ ಮರುಮುದ್ರಣಕ್ಕೆ ಅವಕಾಶ ನೀಡುತ್ತದೆ ಇದರಿಂದ ಆಧಾರ್ ಕಾರ್ಡ್ ಎಟಿಎಂ ಕಾರ್ಡ್ ನಂತೆ ವಾಲೆಟ್ ಗೆ ಹೊಂದಿಕೊಳ್ಳುತ್ತದೆ. ಪಿವಿಸಿ ಆಧಾರ್ ಕಾರ್ಡ್ ಸುಲಭವಾಗಿ ಪರ್ಸ್ನಲ್ಲಿ ಇಟ್ಟುಕೊಳ್ಳಬಹುದು. ಅಂದ್ಹಾಗೆ, ಪಿವಿಸಿ ಕಾರ್ಡ್ ಅನ್ನೋದು ಒಂದು ಪ್ಲಾಸ್ಟಿಕ್ ಕಾರ್ಡ್ ಆಗಿದ್ದು, ಅದರ ಮೇಲೆ ಆಧಾರ್ ಮಾಹಿತಿ ಮುದ್ರಿತವಾಗಿರುತ್ತದೆ. ಈ ಕಾರ್ಡ್ ತಯಾರಿಸಲು 50 ರೂಪಾಯಿ ಶುಲ್ಕ ವಿಧಿಸಲಾಗುತ್ತೆ.ಹಾಗಾದ್ರೆ, ಅಧಿಕೃತ ವೆಬ್ ಸೈಟ್ ಮೂಲಕ ಪಿವಿಸಿ ಆಧಾರ್ ಕಾರ್ಡ್ ಪಡೆಯುವುದು ಹೇಗೆ..?

ನೀವು ಆಧಾರ್ ಪಿವಿಸಿ ಕಾರ್ಡ್ ಮುದ್ರಿಸಲು ಬಯಸಿದರೆ, ಇದಕ್ಕಾಗಿ ನೀವು ಯುಐಡಿಎಐ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ ಲೈನ್ ಪೋರ್ಟಲ್ https://resident.uidai.gov.in/ ಅರ್ಜಿ ಸಲ್ಲಿಸಬಹುದು. ನಂತ್ರ ನಿಮ್ಮ ಮನೆ ಬಾಗಿಲಲ್ಲಿಯೇ ಪಿವಿಸಿ ಕಾರ್ಡ್ ನಿಮಗೆ ದೊರೆಯುತ್ತದೆ.

Pvc ಆಧಾರ್ ಕಾರ್ಡ್ ಗೆ ಅಪ್ಲೈ ಮಾಡುವ ಕ್ರಮ ಈ ಕೆಳಗಿನಂತಿದೆ..!

*ಮೊದಲಿಗೆ ಅಧಿಕೃತ ವೆಬ್ ಸೈಟ್ https://resident.uidai.gov.in/ ಗೆ ಭೇಟಿ ನೀಡಿ.

*ವೆಬ್ ಸೈಟ್ ನ ಹೋಮ್ ಪೇಜ್ ನಲ್ಲಿ ‘ನನ್ನ ಆಧಾರ್’ ವಿಭಾಗದಲ್ಲಿ ‘ಆರ್ಡರ್ ಆಧಾರ್ ಪಿವಿಸಿ ಕಾರ್ಡ್’ .

*ಈಗ ಲಾಗಿನ್ ವಿವರಗಳನ್ನು ಭರ್ತಿ ಮಾಡುವ ಮೂಲಕ ಲಾಗಿನ್ ಆಗಿ.

*ನಂತ್ರ ಕ್ಯಾಪ್ಚಾ ಟೈಪ್ ಮಾಡಿ ಮತ್ತು ಸೆಂಡ್ OTP ಮೇಲೆ .

* ಒಟಿಪಿ ಸ್ವೀಕರಿಸಿದ ನಂತರ ಅದನ್ನು ನಮೂದಿಸಿ ‘ಸಬ್ಮಿಟ್’ .

*ಈಗ ನೀವು PVC ಕಾರ್ಡ್ ನ ಮುನ್ನೋಟವನ್ನ ನೋಡುತ್ತೀರಿ.

*ಇದಾದ ನಂತರ, ಮುಂದಿನ ಹಂತದಲ್ಲಿ ಹಣ ಪಾವತಿಯಾಗುತ್ತದೆ. ಹಣ ಪಾವತಿ ಮಾಡಿದ ತಕ್ಷಣ ನಿಮ್ಮ ಆಧಾರ್ ಪಿವಿಸಿ ಕಾರ್ಡ್ ಆರ್ಡರ್ ಮಾಡಲಾಗುತ್ತದೆ. ನಂತ್ರ ಪೋಸ್ಟ್ ಮೂಲಕ ನಿಮ್ಮ ಮನೆ ಬಾಗಿಲಿಗೆ PVC ಮಾದರಿಯ ಆಧಾರ್ ಬಂದು ತಲುಪುತ್ತೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img