Tuesday, May 18, 2021
Homeಸುದ್ದಿ ಜಾಲಉಳಿತಾಯ ಖಾತೆಯನ್ನು ʼಜನ್ ಧನ್ʼ ಖಾತೆಯಾಗಿ ಪರಿವರ್ತಿಸಲು ಇಲ್ಲಿದೆ ಮಾಹಿತಿ

ಇದೀಗ ಬಂದ ಸುದ್ದಿ

ಉಳಿತಾಯ ಖಾತೆಯನ್ನು ʼಜನ್ ಧನ್ʼ ಖಾತೆಯಾಗಿ ಪರಿವರ್ತಿಸಲು ಇಲ್ಲಿದೆ ಮಾಹಿತಿ

ಕೊರೊನಾ ವೈರಸ್ ಹೆಚ್ಚಾಗಿರುವ ಸಂದರ್ಭದಲ್ಲಿ ದೇಶದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುವ ಸಾಧ್ಯತೆಯಿದೆ. ದೇಶದ ಅನೇಕ ಭಾಗಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಜನಧನ್ ಖಾತೆ ತೆರೆಯಲು ಮುಂದಾಗ್ತಿದ್ದಾರೆ. ಕಳೆದ ವರ್ಷದಂತೆ ಈ ಬಾರಿ ಕೇಂದ್ರ ಸರ್ಕಾರ 500-500 ರೂಪಾಯಿಗಳನ್ನು ಖಾತೆಗೆ ನೀಡಲಿದೆ ಎಂಬ ನಂಬಿಕೆಯಲ್ಲಿ ಜನರು ಜನ್ ಧನ್ ಖಾತೆ ತೆರೆಯಲು ಮುಂದಾಗ್ತಿದ್ದಾರೆ.

ಜನ್ ಧನ್ ಖಾತೆ ಇಲ್ಲದವರು, ಈಗಾಗಲೇ ಬ್ಯಾಂಕಿನಲ್ಲಿ ಸಾಮಾನ್ಯ ಉಳಿತಾಯ ಖಾತೆಯನ್ನು ಹೊಂದಿರುವವರು ಖಾತೆಯನ್ನು ಜನ್ ಧನ್ ಖಾತೆಗೆ ಬದಲಾಯಿಸಬಹುದು. ಇದರ ಪ್ರಕ್ರಿಯೆ ತುಂಬಾ ಸುಲಭ. ಬ್ಯಾಂಕ್ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ ಉಳಿತಾಯ ಖಾತೆಯನ್ನು ಜನ್ ಧನ್ ಖಾತೆಯಾಗಿ ಪರಿವರ್ತಿಸಬಹುದು. ಇದಕ್ಕಾಗಿ ಗ್ರಾಹಕರು ತಮ್ಮ ಬ್ಯಾಂಕ್‌ಗೆ ಹೋಗಬೇಕಾಗುತ್ತದೆ. ಬ್ಯಾಂಕ್ ನಲ್ಲಿ ಮೊದಲು ರುಪೇ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಫಾರ್ಮ್ ಭರ್ತಿ ಮಾಡಿ ಅದನ್ನು ಬ್ಯಾಂಕಿಗೆ ಸಲ್ಲಿಸಬೇಕು. ಇದಕ್ಕೆ ಒಪ್ಪಿಗೆ ಸಿಕ್ಕಲ್ಲಿ ನಿಮ್ಮ ಖಾತೆ ಜನ್ ಧನ್ ಖಾತೆಗೆ ವರ್ಗಾವಣೆಯಾಗುತ್ತದೆ.

ಜನ್ ಧನ್ ಖಾತೆಯನ್ನು ಹೊಂದಿದ್ದರೆ ಖಾತೆಯಲ್ಲಿ ಕನಿಷ್ಠ ಬಾಕಿ ಉಳಿಸಿಕೊಳ್ಳಬೇಕೆಂಬ ನಿಯಮವಿರುವುದಿಲ್ಲ. ಉಳಿತಾಯ ಖಾತೆಯಷ್ಟೇ ಬಡ್ಡಿ ಸಿಗುತ್ತದೆ. ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವೂ ಉಚಿತವಾಗಿರುತ್ತದೆ. ಆಕಸ್ಮಿಕ ವಿಮೆ 2 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಓವರ್‌ಡ್ರಾಫ್ಟ್ ಸೌಲಭ್ಯ 10 ಸಾವಿರ ರೂಪಾಯಿಗಳವರೆಗೆ ಇರಲಿದೆ. ಲೈಫ್ ಕವರ್ 30,000 ರೂಪಾಯಿಯಾಗಿದ್ದು, ಅರ್ಹತಾ ಷರತ್ತುಗಳನ್ನು ಪೂರೈಸಿದ ನಂತರ ಫಲಾನುಭವಿಯ ಸಾವಿನ ನಂತ್ರ ಸಿಗುತ್ತದೆ. ನಗದು ಹಿಂಪಡೆಯುವಿಕೆ ಮತ್ತು ಶಾಪಿಂಗ್ ಮಾಡಲು ರೂಪೆ ಕಾರ್ಡ್ ಲಭ್ಯವಿದೆ.

ಅನೇಕ ಸರ್ಕಾರಿ ಯೋಜನೆಗಳ ಹಣ ನೇರವಾಗಿ ಖಾತೆಗೆ ಬರುತ್ತದೆ. ವಿಮೆ, ಪಿಂಚಣಿ ಪಡೆಯುವುದು ಸುಲಭವಾಗುತ್ತದೆ. ದೇಶಾದ್ಯಂತ ಹಣ ವರ್ಗಾವಣೆಯನ್ನು ಸುಲಭವಾಗಿ ಮಾಡಬಹುದು. ಪಿಎಂ ಕಿಸಾನ್ ಮತ್ತು ಶ್ರಮಯೋಗಿ ಮಾನ್ ಧನ್ ಯೋಜನೆಗಳಲ್ಲಿ ಪಿಂಚಣಿಗಾಗಿ ಖಾತೆ ತೆರೆಯಲಾಗುವುದು.

ಹೊಸ ಜನ ಧನ್ ಖಾತೆ ತೆರೆಯಲು ಬ್ಯಾಂಕಿಗೆ ಹೋಗಿ ನಿಗದಿತ ಫಾರ್ಮ್ ಭರ್ತಿ ಮಾಡಬೇಕು. ಖಾತೆದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಉದ್ಯೋಗ, ವಾರ್ಷಿಕ ಆದಾಯ, ನಾಮಿನಿ, ಗ್ರಾಮ ಕೋಡ್ ಅಥವಾ ಟೌನ್ ಕೋಡ್ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಬೇಕು.

ಫಾರ್ಮ್‌ನೊಂದಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ ನೀಡಬೇಕಾಗುತ್ತದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img