Tuesday, May 11, 2021
Homeಸುದ್ದಿ ಜಾಲನಟಿ ಕಂಗನಾಗೆ ಮತ್ತೆ ಶಾಕ್: ಟ್ವಿಟರ್ ಬಳಿಕ ಫ್ಯಾಶನ್ ಡಿಸೈನರ್ ಗಳಿಂದಲೂ ಬಹಿಷ್ಕಾರ..!

ಇದೀಗ ಬಂದ ಸುದ್ದಿ

ನಟಿ ಕಂಗನಾಗೆ ಮತ್ತೆ ಶಾಕ್: ಟ್ವಿಟರ್ ಬಳಿಕ ಫ್ಯಾಶನ್ ಡಿಸೈನರ್ ಗಳಿಂದಲೂ ಬಹಿಷ್ಕಾರ..!

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಗ್ಗೆ ಸಾಲು ಸಾಲು ಟ್ವೀಟ್​ಗಳನ್ನ ಮಾಡಿದ ಕಂಗನಾ ರಣಾವತ್​​ ಖಾತೆಗೆ ಟ್ವಿಟರ್​ ಇಂಡಿಯಾ ಕೊಕ್​ ನೀಡಿದೆ.‌

ಟ್ವಿಟರ್​ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ಕಂಗನಾ ರಣಾವತ್​​ರ ಟ್ವಿಟರ್​ ಖಾತೆಯನ್ನ ಶಾಶ್ವತವಾಗಿ ಅಮಾನತು ಮಾಡಲಾಗಿದೆ.

ಕಂಗನಾ ರಣಾವತ್​ರನ್ನ ಟ್ವಿಟರ್​ ಬಹಿಷ್ಕರಿಸಿದ ಬೆನ್ನಲ್ಲೇ ಇದೀಗ ಭಾರತೀಯ ಫ್ಯಾಷನ್​ ಡಿಸೈನರ್​ಗಳೂ ಸಹ ಕಂಗನಾರನ್ನ ಬಹಿಷ್ಕರಿಸಿದ್ದಾರೆ. ಡಿಸೈನರ್​ ರಿಮಜಿನ್​ ದಾದು ಈ ಸಂಬಂಧ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನ ಶೇರ್​ ಮಾಡಿದ್ದಾರೆ.

ಒಳ್ಳೆಯ ಕೆಲಸ ಮಾಡಲು ತುಂಬಾ ವಿಳಂಬ ಮಾಡಬಾರದು..! ಈ ಹಿಂದೆ ಕಂಗನಾ ಜೊತೆ ಮಾಡಿದ್ದ ಎಲ್ಲಾ ಕೊಲ್ಯಾಬುರೇಷನ್​ ಫೋಟೋಗಳ ಪೋಸ್ಟ್​ನ್ನು ನಮ್ಮ ಖಾತೆಯಿಂದ ಡಿಲೀಟ್​ ಮಾಡುತ್ತಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ಕಂಗನಾ ಜೊತೆ ಯಾವುದೇ ಕೆಲಸ ಮಾಡೋದಿಲ್ಲ ಎಂದು ಬರೆದಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಫ್ಯಾಶನ್​ ಡಿಸೈನರ್​, ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಬಳಿಕ ಹಿಂಸಾಚಾರ ಪ್ರೇರಿತ ಕಂಗನಾರ ವಿವಾದಾತ್ಮಕ ಟ್ವೀಟ್​​ನ ಪರಿಣಾಮದಿಂದ ದೇಶ ಚೇತರಿಸಿಕೊಳ್ಳಬೇಕಿದೆ. ಟ್ವಿಟರ್​ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಕಂಗನಾರ ಖಾತೆ ಶಾಶ್ವತವಾಗಿ ಅಮಾನತಾಗಿದೆ. ಅತಿರೇಕದ ಟ್ವೀಟ್​​ನಿಂದ ಕೋಲಾಹಲಕ್ಕೆ ಕಾರಣವಾಗಿದೆ. ಹೀಗಾಗಿ ಭಾರತೀಯ ಫ್ಯಾಷನ್​ ಡಿಸೈನರ್​ಗಳು ಸಹ ಕಂಗನಾರನ್ನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಕಂಗನಾ ಜೊತೆ ನಾವು ಒಡನಾಟ ಇಟ್ಟುಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img