Tuesday, May 11, 2021
Homeಸುದ್ದಿ ಜಾಲಮೆಕ್ಸಿಕೊ: ಮೆಟ್ರೊ ಮೇಲ್ಸೇತುವೆ ಕುಸಿದು 23 ಜನರ ಸಾವು,70ಕ್ಕೂ ಹೆಚ್ಚು ಮಂದಿಗೆ ಗಾಯ

ಇದೀಗ ಬಂದ ಸುದ್ದಿ

ಮೆಕ್ಸಿಕೊ: ಮೆಟ್ರೊ ಮೇಲ್ಸೇತುವೆ ಕುಸಿದು 23 ಜನರ ಸಾವು,70ಕ್ಕೂ ಹೆಚ್ಚು ಮಂದಿಗೆ ಗಾಯ

ಮೆಕ್ಸಿಕೊ ಸಿಟಿ: ಮೆಕ್ಸಿಕೊ ನಗರದ ಮೆಟ್ರೊ ರೈಲ್ವೆಯ ಮೇಲುಸೇತುವೆ ಕುಸಿದ ಪರಿಣಾಮ 23 ಜನರು ಮೃತಪಟ್ಟು, 70ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಮೆಟ್ರೊ ರೈಲು ಸಂಚರಿಸುವ ವೇಳೆಯೇ ಸೇತುವೆ ಕುಸಿದಿದೆ. ಹೀಗಾಗಿ ಸೇತುವೆ ಕೆಳಗೆ ಸಂಚರಿಸುತ್ತಿದ್ದ ವಾಹನಗಳ ಮೇಲೆ ಮೆಟ್ರೊ ರೈಲು ಬಿದ್ದ ಪರಿಣಾಮ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ. ನಂತರ, ಕ್ರೇನ್‌ ಬಳಸಿ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಯಿತು ಎಂದು ಮೇಯರ್‌ ಕ್ಲಾಡಿಯಾ ಶೀನ್‌ಬಾಮ್‌ ತಿಳಿಸಿದ್ದಾರೆ.

ಗಾಯಗೊಂಡಿರುವವರ ಪೈಕಿ 49 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಜನರ ಸ್ಥಿತಿ ಗಂಭೀರವಾಗಿದೆ. ಸತ್ತವರ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img