Thursday, July 29, 2021
Homeಸುದ್ದಿ ಜಾಲಚಾಮರಾಜನಗರಕ್ಕೆ ತಪ್ಪಿಲ್ಲ ಗಂಡಾಂತರ: ಆಕ್ಸಿಜನ್ ಬೆನ್ನಲ್ಲೇ ಬೆಡ್​​ಗಳ ಕೊರತೆ

ಇದೀಗ ಬಂದ ಸುದ್ದಿ

ಚಾಮರಾಜನಗರಕ್ಕೆ ತಪ್ಪಿಲ್ಲ ಗಂಡಾಂತರ: ಆಕ್ಸಿಜನ್ ಬೆನ್ನಲ್ಲೇ ಬೆಡ್​​ಗಳ ಕೊರತೆ

ಚಾಮರಾಜನಗರ : ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಭಾರೀ ದುರಂತವೇ ನಡೆದುಹೋಯ್ತು. ಈಗ ಬೆಡ್ ಕೊರತೆ ಎದುರಾಗಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯ 50 ಐಸಿಯು, 75 ಆಕ್ಸಿಜನೇಟೆಡ್, 43 ಜನರಲ್ ಬೆಡ್ ಗಳು ಸೇರಿದಂತೆ ಎಲ್ಲಾ 168 ಬೆಡ್ ಗಳು ಭರ್ತಿಯಾಗಿವೆ. ತೀವ್ರ ತರದ ರೋಗ ಲಕ್ಷಣವುಳ್ಳ, ಆಕ್ಸಿಜನ್ ಅಗತ್ಯ ಇರುವ ಅಥವಾ ರೋಗಲಕ್ಷಣಗಳಿಲ್ಲದ ಹೊಸ ಸೋಂಕಿತರಿಗೆ ಬೆಡ್ ದೊರೆಯುವುದು ಅನುಮಾನವಾಗಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರು ಜಿಲ್ಲಾಡಳಿತ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಕರ್ನಾಟಕ ಮುಕ್ತ ವಿವಿ ಅಧ್ಯಯನ ಕೇಂದ್ರ ಹಾಗು ಮಾದಾಪುರದ ಬಳಿ ಇರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹಾಸ್ಟೆಲ್ ನಲ್ಲಿ 85 ಬೆಡ್ ಗಳ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ ಇಲ್ಲಿಗೆ ಸೋಂಕಿತ ರನ್ನು ದಾಖಲಿಸುವ ಪ್ರಯತ್ನ ಮಾಡಿಲ್ಲ. ಈ ಕೇಂದ್ರಗಳಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಸೋಂಕಿತರಿದ್ದಾರೆ. ಉಳಿದಂತೆ ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರಿನಲ್ಲಿರುವ ಕೇರ್ ಸೆಂಟರ್ ಗಳಿಗೆ ಯಾವ ಸೋಂಕಿತರನ್ನು ದಾಖಲು ಮಾಡಿಲ್ಲ. ಪ್ರತಿದಿನ ಪತ್ತೆಯಾಗುವ ಹೊಸ ಸೋಂಕಿತರನ್ನು ಈ ಕೇರ್ ಸೆಂಟರ್ ಗಳಿಗೆ ದಾಖಲಿಸದೇ ಹೋಂ ಐಸೋಲೇಷನ್​ಗೆ ಕಳುಹಿಸಲಾಗುತ್ತಿದೆ. ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಂದಲೇ ಗಂಡಾಂತರ ಎದುರಾಗಿದೆ. ಇವರ ಮೇಲೆ ಆರೋಗ್ಯ ಇಲಾಖೆ ನೇರ ನಿಗಾ ವಹಿಸದ ಕಾರಣ ಇವರಲ್ಲಿ ಬಹುತೇಕ ಮಂದಿ ಎಲ್ಲೆಂದರಲ್ಲಿ ಸುತ್ತಾಡುತ್ತಾ ಕೊರೋನಾ ಸ್ಫೋಟಕ್ಕೆ ಕಾರಣವಾಗುತ್ತಿದ್ದಾರೆ. ಇದಲ್ಲದೆ ಹೋಂ ಐಸೋಲೇಷನ್ ನಿಂದಾಗಿ ಮನೆಮಂದಿಗೆಲ್ಲ ಕೊರೋನಾ ಹಬ್ಬುತ್ತಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರತಿದಿನ 400 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಹಾಲಿ 3500ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 457 ಮಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ನಾಲ್ಕು ಮಂದಿ ಮಾತ್ರ ಕೇರ್ ಸೆಂಟರ್ ಗಳಲ್ಲಿ ಇದ್ದಾರೆ. ಉಳಿದವರು ಅಂದರೆ ಶೇಕಡಾ 85 ರಷ್ಟು ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದಾರೆ.

ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಐಸಿಯು ಸೇರಿದಂತೆ 200 ಬೆಡ್ ಗಳ ಕೇರ್ ಸೆಂಟರ್ ಆರಂಭಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕೆಲ ದಿನಗಳ ಹಿಂದೆ ತಿಳಿಸಿದ್ದರು. ಆದರೆ ಅದು ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಇಂದು ಚಾಮರಾಜನಗರಕ್ಕೆ ಭೇಟಿ ನೀಡಿರುವ ಸಚಿವ ಸುರೇಶ್ ಕುಮಾರ್ ಇನ್ನೆರಡು ದಿನದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕೇರ್ ಸೆಂಟರ್ ಆರಂಭಿಸುವುದಾಗಿ ತಿಳಿಸಿದ್ದಾರೆ. ಯಾವುದೇ ಹೊಸ ಪ್ರಕರಣ ವರದಿಯಾಗಲಿ ತಕ್ಷಣ ಅವರನ್ನು ಕಡ್ಡಾಯವಾಗಿ ಆಸ್ಪತ್ರೆ ಇಲ್ಲವೆ ಕೇರ್ ಸೆಂಟರ್ ಗಳಿಗೆ ದಾಖಲಿಸಿ 14 ದಿನಗಳ ಕಾಲ ಐಸೋಲೇಷನ್ ನಲ್ಲಿಟ್ಟರೆ ಮಾತ್ರ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಕೇವಲ ಹೋಂ ಐಸೋಲೇಷನ್ ಗೆ ಕಳುಹಿಸುತ್ತಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img